ಅಫ್ಗಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಾಜೌರ್ ಜಿಲ್ಲೆಯ ಮಾಮೊಂಡ್ ಬಳಿ ಉಗ್ರರು ಭದ್ರತಾ ಪಡೆಯ ವಾಹನದ ಮೇಲೆ ದಿಢೀರ್ ಗುಂಡಿನ ದಾಳಿ ನಡೆಸಿದರು. ದಾಳಿಯ ತೀವ್ರತೆಯಿಂದಾಗಿ ಒಬ್ಬ ಯೋಧ ಮೃತಪಟ್ಟಿದ್ದು, ವಾಹನವು ಜಖಂಗೊಂಡಿತು. ಭದ್ರತಾ ಪಡೆಯ ಇನ್ನಷ್ಟು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಹೇಳಿವೆ.