ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿ ಒಪ್ಪಂದ ರದ್ದತಿಗೆ ದಕ್ಷಿಣ ಕೊರಿಯಾ ಚಿಂತನೆ

Published 3 ಜೂನ್ 2024, 16:33 IST
Last Updated 3 ಜೂನ್ 2024, 16:33 IST
ಅಕ್ಷರ ಗಾತ್ರ

ಸೋಲ್: ತ್ಯಾಜ್ಯ ಹಾಗೂ ಗೊಬ್ಬರ ತುಂಬಿದ ಬಲೂನ್‌ಗಳನ್ನು ಹಾರಿಬಿಡುತ್ತಿರುವ ಉತ್ತರ ಕೊರಿಯಾಕ್ಕೆ ತಕ್ಕ ಪಾಠ ಕಲಿಸಲು ಆ ದೇಶದ ಜೊತೆಗಿನ ಶಾಂತಿ ಮತ್ತು ಹೊಂದಾಣಿಕೆ ಒಪ್ಪಂದವನ್ನು ರದ್ದುಪಡಿಸುವುದಾಗಿ ದಕ್ಷಿಣ ಕೊರಿಯಾ ಸೋಮವಾರ ಘೋಷಿಸಿದೆ. 

ದಕ್ಷಿಣ ಕೊರಿಯಾದ ನಾಗರಿಕರೊಬ್ಬರು ಕರಪತ್ರ ಹಂಚಿಕೆ ಅಭಿಯಾನಕ್ಕೆ ಪ್ರತೀಕಾರವಾಗಿ ಹಲವು ದಿನಗಳ ಕಾಲ ಉತ್ತರ ಕೊರಿಯಾವು ನೂರಾರು ಕಸ ಮತ್ತು ಗೊಬ್ಬರ ತುಂಬಿದ ಬಲೂನ್‌ಗಳನ್ನು ದಕ್ಷಿಣ ಕೊರಿಯಾದತ್ತ ಹಾರಿಬಿಟ್ಟಿತ್ತು. ಇದಕ್ಕೆ ಭಾನುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದಕ್ಷಿಣ ಕೊರಿಯಾ, ಉತ್ತರ ಕೊರಿಯಾದ ವಿರುದ್ಧ ಸಹಿಸಲಾಗದ ಪ್ರತೀಕಾರದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. 

ಸೋಮವಾರ ಪ್ರತಿಕ್ರಿಯಿಸಿದ ದಕ್ಷಿಣ ಕೊರಿಯಾದ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಕೌನ್ಸಿಲ್, ‘ಉತ್ತರ ಕೊರಿಯಾ ಜೊತೆಗಿನ ಪರಸ್ಪರ ನಂಬಿಕೆ ಮರುಸ್ಥಾಪನೆಯಾಗುವವರೆಗೆ 2018ರಲ್ಲಿ ಮಾಡಿಕೊಳ್ಳಲಾದ ಶಾಂತಿ ಒಪ್ಪಂದವನ್ನು ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆ. ಇದರಿಂದ ಉತ್ತರ ಕೊರಿಯಾದ ಗಡಿಗಳಲ್ಲಿ ಸೇನಾ ಕವಾಯತು ನಡೆಸಲು ಸಾಧ್ಯವಾಗಲಿದೆ. ಜೊತೆಗೆ ಉತ್ತರ ಕೊರಿಯಾದ ಪ್ರಚೋದನಾಕಾರಿ ಕಾರ್ಯವೈಖರಿಗೆ ತತ್‌ಕ್ಷಣವೇ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿದೆ’ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT