ಸೋಲ್: ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು ಮಿಲಿಟರಿ ಆಡಳಿತ ಜಾರಿಗೊಳಿಸಿದ ಯೂನ್ ಅವರನ್ನು ಈಗಾಗಲೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ. ಅವರ ಬಂಧನಕ್ಕೆ ಹೊರಡಿಸಿರುವ ವಾರಂಟ್ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಯೋಲ್ ಅವರನ್ನು ಬಂಧಿಸಲಾಗಿದೆ.

ಒಂದೇ ತಿಂಗಳಲ್ಲಿ ಇಬ್ಬರು ಮುಖಂಡರು ವಾಗ್ದಂಡನೆಗೆ ಗುರಿಯಾಗಿದ್ದು, ಈ ಘಟನೆಗಳು ದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿವೆ.

ಈಚೆಗೆ ಬಂಧನದ ವಾರಂಟ್ ಕಾನೂನುಬಾಹಿರವಾಗಿದೆ ಎಂದು ಪ್ರತಿಪಾದಿಸಿದ್ದ ಯೂನ್ ಅವರ ವಕೀಲರ ವಾದವನ್ನು ಸೋಲ್ ನ್ಯಾಯಾಲಯ ತಿರಸ್ಕರಿಸಿತ್ತು.

‘ತನಿಖಾಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ತನಿಖೆ ಕುರಿತಂತೆ ಅಧ್ಯಕ್ಷರ ಭದ್ರತಾ ಪಡೆಯೊಂದಿಗೆ ಹಲವು ಭಾರಿ ವಾಗ್ವಾದ ನಡೆಸಬೇಕಾಯಿತು. ದೇಶದ ಕಾನೂನು ಪ್ರಕ್ರಿಯೆಗೂ ಸಹಕರಿಸದ ಅವರ ವರ್ತನೆಗೆ ವಿಷಾದವಿದೆ’ ಎಂದೂ ಭ್ರಷ್ಟಾಚಾರ ತನಿಖಾ ಸಂಸ್ಥೆ ಪ್ರತಿಕ್ರಿಯಿಸಿದೆ.

ತೀವ್ರ ಚಳಿಯ ವಾತಾವರಣದಲ್ಲೂ ಅಧ್ಯಕ್ಷರ ನಿವಾಸದ ಹೊರಗೆ, ಯೋಲ್ ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸುದೀರ್ಘ ಕಾಲ ಗುಂಪುಗೂಡಿದ್ದರು. ದಕ್ಷಿಣ ಕೊರಿಯಾ, ಅಮೆರಿಕದ ಧ್ವಜಹಿಡಿದಿದ್ದ ಬೆಂಬಲಿಗರು ಅಧ್ಯಕ್ಷರ ರಕ್ಷಣೆಗೆ ಆಗ್ರಹಿಸುವ ಘೋಷಣೆಗಳನ್ನು ಕೂಗಿದ್ದರು.
.ದಕ್ಷಿಣ ಕೊರಿಯಾ ಮುಂದುವರಿದ ಬಿಕ್ಕಟ್ಟು; ಯೂನ್ ಬಂಧನಕ್ಕೆ ಭಾನುವಾರವೂ ಅಡ್ಡಿ.ಬಂಧನ ಸಾಧ್ಯತೆ: ಪ್ರತಿಭಟನೆಗೆ ಕರೆ ನೀಡಿದ ಪದಚ್ಯುತ ದಕ್ಷಿಣ ಕೊರಿಯಾ ಅಧ್ಯಕ್ಷ.ದಕ್ಷಿಣ ಕೊರಿಯಾ | ಪದಚ್ಯುತ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್.ದಕ್ಷಿಣ ಕೊರಿಯಾ: ಹಂಗಾಮಿ ಅಧ್ಯಕ್ಷರಿಗೆ ವಾಗ್ದಂಡನೆ.ದಕ್ಷಿಣ ಕೊರಿಯಾ | ‘ರಾಷ್ಟ್ರೀಯ ಸರ್ಕಾರ’ ರಚನೆಗೆ ವಿಪಕ್ಷಗಳ ಪ್ರಸ್ತಾವ .ದಕ್ಷಿಣ ಕೊರಿಯಾ: ಆತ್ಮಹತ್ಯೆಗೆ ಯತ್ನಿಸಿದ ಮಾಜಿ ರಕ್ಷಣಾ ಸಚಿವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.