ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ, ರಷ್ಯಾ, ಯುಎಇ ಗಗನಯಾನಿಗಳನ್ನು ಐಎಸ್‌ಎಸ್‌ಗೆ ಕಳಿಸಿದ ಸ್ಪೇಸ್‌ಎಕ್ಸ್‌

Last Updated 2 ಮಾರ್ಚ್ 2023, 10:55 IST
ಅಕ್ಷರ ಗಾತ್ರ

ಕೇಪ್‌ ಕೆನವೆರಲ್, ಅಮೆರಿಕ: ನಾಸಾದ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ, ಸ್ಪೇಸ್‌ಎಕ್ಸ್‌ ಸಂಸ್ಥೆಯು ನಾಲ್ವರು ಗಗನಯಾನಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್‌) ಗುರುವಾರ ಕಳುಹಿಸಿತು.

ಪೂರ್ವ ಕರಾವಳಿಯಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಗಗನನೌಕೆಯನ್ನು ಹೊತ್ತ ರಾಕೆಟ್ ನಭದತ್ತ ಚಿಮ್ಮಿತು. ರಷ್ಯಾ ಹಾಗೂ ಅಮೆರಿಕದ ಗಗನಯಾತ್ರಿಗಳ ಜೊತೆ, ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್‌ ಸಂಸ್ಥಾನಗಳ (ಯುಎಇ) ಸುಲ್ತಾನ್ ಅಲ್‌ ನೆಯಾದಿ ತಂಡದಲ್ಲಿದ್ದಾರೆ.

ಈ ತಂಡವು ಆರು ತಿಂಗಳ ಕಾಲ ಐಎಸ್‌ಎಸ್‌ನಲ್ಲಿರಲಿದೆ. ಕಳೆದ ಅಕ್ಟೋಬರ್‌ನಿಂದ ರಷ್ಯಾ, ಅಮೆರಿಕ ಹಾಗೂ ಜಪಾನ್‌ನ ಗಗನಯಾನಿಗಳನ್ನು ಒಳಗೊಂಡ ತಂಡ ಐಎಸ್‌ಎಸ್‌ನಲ್ಲಿದೆ. ಗುರುವಾರ ಹೊರಟಿರುವ ಗಗನಯಾನಿಗಳು ಐಎಸ್‌ಎಸ್‌ ತಲುಪಿದ ನಂತರ, ಅಲ್ಲಿರುವವರು ಭೂಮಿಗೆ ಮರಳುವರು ಎಂದು ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಪ್ರೇಕ್ಷಕರ ಸಾಲಿನಲ್ಲಿದ್ದ ಯುಎಇಯ 80 ಪ್ರಜೆಗಳು, ತಮ್ಮ ದೇಶದ ಗಗನಯಾನಿಯನ್ನು ಹೊತ್ತ ವ್ಯೋಮನೌಕೆ ಆಕಾಶದತ್ತ ಹಾರಿದ್ದನ್ನು ಕಣ್ತುಂಬಿಕೊಂಡರು. ಯುಎಇಯಲ್ಲಿನ ಎಲ್ಲ ಶಾಲೆಗಳು ಹಾಗೂ ಕಚೇರಿಗಳಲ್ಲಿ ಈ ಉಡಾವಣಾ ದೃಶ್ಯಗಳ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT