ಮ್ಯಾಡ್ರಿಡ್ (ಎಎಫ್‌ಪಿ): ಸ್ಪೇನ್‌ನಲ್ಲಿ ಮಂಕಿಪಾಕ್ಸ್ ವೈರಸ್ ಸಂಬಂಧಿತ ಮತ್ತೊಂದು ಸಾವು ಸಂಭವಿಸಿರುವುದು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಮಂಕಿಪಾಕ್ಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.

‘ಒಟ್ಟು 3,750 ರೋಗಿಗಳ ಪೈಕಿ 120 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಸಚಿವಾಲಯ ವರದಿಯಲ್ಲಿ ತಿಳಿಸಿದೆ.

ಆದರೆ ಎರಡನೇ ಸಾವು ಸಂಭವಿಸಿದ ದಿನಾಂಕವನ್ನು ಅದು ಸ್ಪಷ್ಟಪಡಿಸಿಲ್ಲ. ಆರೋಗ್ಯ ಇಲಾಖೆ ಪ್ರಕಾರ ಸ್ಪೇನ್‌ನಲ್ಲಿ ಈವರೆಗೆ 4,298 ಜನರಿಗೆ ಸೋಂಕು ತಗುಲಿದೆ.

ಮಂಕಿಪಾಕ್ಸ್‌ಗೆ ಸ್ಪೈನ್‌ನಲ್ಲಿ ಶುಕ್ರವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದನ್ನು ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್‌ನಿಂದ ಸಂಭವಿಸಿದ ಮೊದಲ ಸಾವು ಎಂದು ಸ್ಪೈನಿನ ಮಾಧ್ಯಮಗಳು ವರದಿ ಮಾಡಿದ್ದವು. ಬ್ರೆಜಿಲ್‌ನಲ್ಲೂ ಶುಕ್ರವಾರ ಮಂಕಿಪಾಕ್ಸ್ ಸಂಬಂಧಿತ ಒಂದು ಸಾವು ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.