ಕೊಲಂಬೊ: ಶ್ರೀಲಂಕಾದಲ್ಲಿ ಸೇನಾ ಹೆಲಿಕಾಪ್ಟರ್ ಇಂದು(ಶುಕ್ರವಾರ) ಪತನಗೊಂಡಿದ್ದು, ಸಶಸ್ತ್ರ ಪಡೆಯ 6 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಶ್ರೀಲಂಕಾ ವಾಯುಪಡೆಯ ಬೆಲ್ 212 ಹೆಲಿಕಾಪ್ಟರ್, ಮಧುರು ಓಯಾದ ಉತ್ತರ ಕೇಂದ್ರ ಜಲಾಶಯಕ್ಕೆ ಅಪ್ಪಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಸೇನೆಯ ವಿಶೇಷ ಪಡೆಗಳ ಬ್ರಿಗೇಡ್ನ ಪಾಸಿಂಗ್ ಔಟ್ ಪೆರೇಡ್ನಲ್ಲಿ ಪ್ರದರ್ಶನ ನೀಡಲು ಈ ಹೆಲಿಕಾಪ್ಟರ್ ಹೊರಟಿತ್ತು.

ಮೃತರಲ್ಲಿ ವಾಯುಪಡೆಯ ಇಬ್ಬರು, ಮತ್ತು ವಿಶೇಷ ಪಡೆಗಳ ನಾಲ್ವರು ಸೈನಿಕರು ಸೇರಿದ್ದಾರೆ. ಅಪಘಾತದ ತನಿಖೆಗಾಗಿ 9 ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ ಎಂದು ಶ್ರೀಲಂಕಾ ವಾಯುಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.