ವಾಷಿಂಗ್ಟನ್: ಅಮೆರಿಕದ ರಾಜಧಾನಿಯಲ್ಲಿರುವ ಐತಿಹಾಸಿಕ ರಾಷ್ಟ್ರೀಯ ಸ್ಮಾರಕ ಮತ್ತು ಲಿಂಕನ್ ಸ್ಮಾರಕದಿಂದ ಪೂರ್ವ ಕರಾವಳಿಯ ಗೋಲ್ಡನ್ ಬ್ರಿಡ್ಜ್ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೂರಾರು ಬೆಂಬಲಿಗರು ರ್ಯಾಲಿ ನಡೆಸಿದರು.

ಅಮೆರಿಕದಲ್ಲಿನ ಬಿಜೆಪಿಯ ಸಾಗರೋತ್ತರ ಗೆಳೆಯರು (ಒಎಫ್ಬಿಜೆಪಿ) ಭಾನುವಾರದಂದು ‘ಮೋದಿ ಕಾ ಪರಿವಾರ್ ಮಾರ್ಚ್’ ರ್ಯಾಲಿಗಳನ್ನು ಆಯೋಜಿಸಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಸ್ಯಾನ್ ಫ್ರಾನ್ಸಿಸ್ಕೊ, ಹ್ಯೂಸ್ಟನ್, ಅಟ್ಲಾಂಟಾ ಸೇರಿದಂತೆ 16ಕ್ಕೂ ಹೆಚ್ಚು ನಗರಗಳ ಸಾಂಪ್ರದಾಯಿಕ ಸ್ಥಳಗಳಲ್ಲಿ ರ್ಯಾಲಿಗಳನ್ನು ಏರ್ಪಡಿಸಲಾಗಿತ್ತು. ಎಲ್ಲ ವಯೋಮಾನದವರು ಇದರಲ್ಲಿ ಭಾಗಿಯಾಗಿದ್ದರು. ಭಾರತದಲ್ಲಿ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಭಾರತೀಯ ಅಮೆರಿಕನ್ ಸಮುದಾಯದ ಸದಸ್ಯರು ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು’ ಎಂದು ಅಮೆರಿಕದ ಒಎಫ್ಬಿಜೆಪಿ ಅಧ್ಯಕ್ಷ ಅಡಪ ಪ್ರಸಾದ್ ತಿಳಿಸಿದ್ದಾರೆ.

‘ಈ ರ್ಯಾಲಿಯು ಮೋದಿಯ ನಾಯಕತ್ವದ ಬಗ್ಗೆ ಇರುವ ಗೌರವ ಮತ್ತು ಒಗ್ಗಟ್ಟನ್ನು ಬಿಂಬಿಸಿತು’ ಎಂದು ಸ್ಯಾನ್ ಫ್ರಾನ್ಸಿಸ್ಕೊದ ಸಚೀಂದ್ರನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.