ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವೀಡನ್‌: ಚೀನಾ ಪತ್ರಕರ್ತೆ ಗಡೀಪಾರು

Published 8 ಏಪ್ರಿಲ್ 2024, 13:31 IST
Last Updated 8 ಏಪ್ರಿಲ್ 2024, 13:31 IST
ಅಕ್ಷರ ಗಾತ್ರ

ಕೋಪನ್‌ಹೇಗನ್‌ (ಡೆನ್ಮಾರ್ಕ್‌): ಚೀನಾ ಮೂಲದ ಪತ್ರಕರ್ತೆಯೊಬ್ಬರನ್ನು ಸ್ವೀಡನ್‌ ಗಡೀಪಾರು ಮಾಡಿದೆ. ಇವರು ದೇಶದ ಭದ್ರತೆಗೆ ಬೆದರಿಕೆಯಾಗಿದ್ದರು ಎಂದು ಇಲ್ಲಿನ ಮಾಧ್ಯಮ ಎಸ್‌ವಿಟಿ ಸೋಮವಾರ ವರದಿ ಮಾಡಿದೆ.

57 ವರ್ಷದ ಮಹಿಳೆಯನ್ನು ಇಲ್ಲಿನ ಭದ್ರತಾ ಸಿಬ್ಬಂದಿ ಕಳೆದ ಅಕ್ಟೋಬರ್‌ನಲ್ಲಿ ಬಂಧಿಸಿದ್ದರು. ಇವರನ್ನು ಕಳೆದ ವಾರ ಗಡೀಪಾರು ಮಾಡಲಾಗಿದೆ. ಮತ್ತೆ ದೇಶಕ್ಕೆ ವಾಪಸಾಗದಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.

ಮಹಿಳೆ 20 ವರ್ಷಗಳ ಹಿಂದೆ ಸ್ಕ್ಯಾಂಡಿನಾವಿಯಾಕ್ಕೆ ಬಂದಿದ್ದರು. ವಾಸಕ್ಕೆ ಪರವಾನಗಿಯನ್ನೂ ಪಡೆದು, ಸ್ವೀಡನ್‌ ಪ್ರಜೆಯನ್ನೇ ವಿವಾಹವಾಗಿದ್ದರು. ಮಹಿಳೆಯು, ಚೀನಾ ರಾಯಭಾರ ಕಚೇರಿಯೊಂದಿಗೆ ಹಾಗೂ ಚೀನಾ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಸ್ವೀಡನ್‌ ಜನರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT