ಕೆರ್ವಿಲ್ಲೆ(ಟೆಕ್ಸಾಸ್): ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಹಠಾತ್ ಪ್ರವಾಹಕ್ಕೆ ಟೆಕ್ಸಾಸ್ ನಗರದಲ್ಲಿ ಅಪಾರ ಪ್ರಮಾಣ ಹಾನಿಯುಂಟಾಗಿದ್ದು, ಸಾವಿನ ಸಂಖ್ಯೆ 79ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ನದಿ ತೀರದ ಬೇಸಿಗೆ ಶಿಬಿರದಲ್ಲಿದ್ದ 10 ಬಾಲಕಿಯರು ಸೇರಿದಂತೆ ನಾಪತ್ತೆಯಾದ ಹಲವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೆರ್ರಿ ಕೌಂಟಿಯಲ್ಲಿ 28 ಮಕ್ಕಳು ಸೇರಿದಂತೆ 68 ಜನರ ಶವಗಳು ಪತ್ತೆಯಾದರೆ, ಟ್ರಾವಿಸ್, ಬರ್ನೆಟ್, ಕೆಂಡಾಲ್, ಟಾಮ್ ಗ್ರೀನ್ ಮತ್ತು ವಿಲಿಯಮ್ಸನ್ ಕೌಂಟಿಗಳಲ್ಲಿ 10 ಶವಗಳು ಪತ್ತೆಯಾಗಿರುವುದು ವರದಿಯಾಗಿವೆ.

ಮಳೆ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದರಿಂದ ಜನರ ಸ್ಥಳಾಂತರಕ್ಕೆ ಸ್ಥಳೀಯ ಆಡಳಿತ ಮುಂದಾಗಿದೆ. ಈಗಾಗಲೇ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.