ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್‌: ಪ್ರಧಾನಿ ಆಯ್ಕೆ ಮತದಾನ ಮುಂದೂಡಿಕೆ ಸಾಧ್ಯತೆ

Published 25 ಜುಲೈ 2023, 14:45 IST
Last Updated 25 ಜುಲೈ 2023, 14:45 IST
ಅಕ್ಷರ ಗಾತ್ರ

ಬ್ಯಾಂಕಾಕ್‌ ನೂತನ ಪ್ರಧಾನಿ ಆಯ್ಕೆಗಾಗಿ ಥಾಯ್ಲೆಂಡ್‌ನ ಸಂಸತ್‌ನಲ್ಲಿ ಗುರುವಾರ ನಡೆಯಲಿರುವ ಮತದಾನವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಸ್ಪೀಕರ್‌ ವಾನ್‌ ಮುಹಮ್ಮದ್‌ ನೂರ್‌ ಮತಾ ಮಂಗಳವಾರ ತಿಳಿಸಿದ್ದಾರೆ.

‘ನ್ಯಾಯಾಲಯದ ಆದೇಶ ಬಾಕಿವುಳಿದಿರುವುದರಿಂದ ಮತದಾನವನ್ನು ಮುಂದೂಡುವ ಸಾಧ್ಯತೆ ಇದೆ’ ಎಂದು ಅವರು ವಿವಿರಿಸಿದ್ದಾರೆ.

ಮೂವ್‌ ಫಾರ್ವರ್ಡ್‌ ಪಕ್ಷದ ನಾಯಕ ಪಿಟಾ ಲಿಮ್ಜರೋನ್ರತ್‌ ಅವರನ್ನು ಎರಡನೇ ಬಾರಿಗೆ ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡದಂತೆ ತಡೆಯುವುದು ಕಾನೂನುಬದ್ಧವಾಗಿದೆಯೇ ಎಂಬುದರ ಕುರಿತು ತೀರ್ಪು ನೀಡುವಂತೆ ರಾಜ್ಯ ಒಂಬುಡ್ಸ್‌ಮನ್ ನ್ಯಾಯಾಲಯವನ್ನು ಕೋರಿದೆ.

ಪ್ರಧಾನಿ ಆಯ್ಕೆಗಾಗಿ ಜುಲೈ 13ರಂದು ಮತದಾನ ನಡೆದಿದ್ದು, ಅದರಲ್ಲಿ ಪಿಟಾ ಲಿಮ್ಜರೋನ್ರತ್‌ ಸೋತಿದ್ದರು. ಬಳಿಕ ಅವರನ್ನು ಎರಡನೇ ಬಾರಿಗೆ ನಾಮನಿರ್ದೇಶನ  ಮಾಡಲಾಗಿತ್ತು.

ಥಾಯ್ಲೆಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಎರಡು ತಿಂಗಳುಗಳು ಕಳೆದರೂ ಹೊಸ ಸರ್ಕಾರ ಯಾವಾಗ ಅಧಿಕಾರ ವಹಿಸಿಕೊಳ್ಳಲಿದೆ ಎಂಬ ಅನಿಶ್ಚಿತತೆ ಇನ್ನೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT