ಶನಿವಾರ, 2 ಆಗಸ್ಟ್ 2025
×
ADVERTISEMENT
ADVERTISEMENT

Ceasefire: ಕದನ ವಿರಾಮಕ್ಕೆ ಥಾಯ್ಲೆಂಡ್‌–ಕಾಂಬೋಡಿಯಾ ಒಪ್ಪಿಗೆ

Published : 28 ಜುಲೈ 2025, 15:40 IST
Last Updated : 28 ಜುಲೈ 2025, 15:40 IST
ಫಾಲೋ ಮಾಡಿ
Comments
ದಶಕಗಳಿಂದ ಸಂಘರ್ಷ
1907ರಲ್ಲಿ ಕಾಂಬೋಡಿಯಾದ ಫ್ರೆಂಚ್‌ ವಸಾಹತುಶಾಹಿ ಆಡಳಿತಗಾರರು ಗುರುತಿಸಿದ್ದ ಗಡಿರೇಖೆಯು ಅಸ್ಪಷ್ಟವಾಗಿದ್ದು ಈ ತಾಣದ ಹಕ್ಕುಸ್ಥಾಪನೆಗಾಗಿ ಥಾಯ್ಲೆಂಡ್‌ ಹಾಗೂ ಕಾಂಬೋಡಿಯಾ ಸಂಘರ್ಷಕ್ಕಿಳಿದಿದ್ದವು. 2008ರಿಂದ 2011ರವರೆಗೆ ಅನೇಕ ಬಾರಿ ಸಂಘರ್ಷ ನಡೆದಿತ್ತು. ಥಾಯ್ಲೆಂಡ್‌– ಕಾಂಬೋಡಿಯಾ ನಡುವಿನ 800 ಕಿ.ಮೀ ಗಡಿ ಪ್ರದೇಶದಲ್ಲಿ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಮೂರು ತಿಂಗಳ ಹಿಂದೆ ಕಾಂಬೋಡಿಯಾದ ಸೈನಿಕನೊಬ್ಬನ ಹತ್ಯೆಯ ನಂತರ ಇದು ಉಲ್ಬಣಗೊಂಡಿದೆ. ಸೈನಿಕನ ಹತ್ಯೆಯು ಎರಡು ದೇಶಗಳ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡಿಸಿದ್ದು ಥಾಯ್ಲೆಂಡ್‌ನ ರಾಜಕೀಯದಲ್ಲೂ ತಲ್ಲಣ ಮೂಡಿಸಿತ್ತು.
ಟ್ರಂಪ್‌ ಎಚ್ಚರಿಕೆ: ಸಭೆ ಆಯೋಜನೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಒತ್ತಡದ ಮೇರೆಗೆ ಮಲೇಷ್ಯಾ ಸಭೆ ನಡೆಯಿತು. ಯುದ್ಧವನ್ನು ಮುಂದುವರಿಸಿದರೆ ಎರಡೂ ದೇಶಗಳೊಂದಿಗಿನ ವ್ಯಾಪಾರ ಒಪ್ಪಂದವನ್ನು ರದ್ದುಪಡಿಸುವುದು ಹಾಗೂ ಸುಂಕ ಏರಿಕೆ ಮಾಡುವುದಾಗಿ ಟ್ರಂಪ್‌ ಎಚ್ಚರಿಕೆ ನೀಡಿದ್ದರು. ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಚೀನಾ ಅಮೆರಿಕ ಹಾಗೂ ಮಲೇಷ್ಯಾದ ರಾಯಭಾರ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT