ಮನಿಲಾ: ಪ್ರತಿಕೂಲ ಹವಾಮಾನದ ಕಾರಣದಿಂದ ಮನಿಲಾ ಕೊಲ್ಲಿಯಲ್ಲಿ ಗುರುವಾರ ಮುಳುಗಿದ್ದ ತೈಲ ಟ್ಯಾಂಕರ್ನಲ್ಲಿ ಸೋರಿಕೆ ಉಂಟಾಗಿದೆ ಎಂದು ಫಿಲಿಪೀನ್ಸ್ ಕರಾವಳಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

ಫಿಲಿಪೀನ್ಸ್ ಧ್ವಜ ಹೊತ್ತ ಬತಾನ್ ಪ್ರಾಂತ್ಯದ ಕರಾವಳಿ ಬಳಿ ಈ ಹಡಗು ಮುಳುಗಡೆಯಾಗಿದೆ. ಇದು 65 ಮೀಟರ್ ವಿಸ್ತೀರ್ಣದ ಟೆರ್ರಾ ನೋವ ಹಡಗಾಗಿದ್ದು, 14 ಲಕ್ಷ ಲೀಟರ್ ಕೈಗಾರಿಕೆ ಬಳಕೆಯ ತೈಲವನ್ನು ಹೊತ್ತುಸಾಗುತ್ತಿತ್ತು. ಹಡಗಿನಲ್ಲಿದ್ದ 16 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಒಬ್ಬ ಮುಳುಗಿದ್ದಾನೆ ಎಂದು ಸಿಬ್ಬಂದಿ ತಿಳಿಸಿದರು.

ಮುಳುಗಿರುವ ಹಡಗಿನಿಂದ ವಿಷಪೂರಿತ ತೈಲವನ್ನು ಸುರಕ್ಷಿತವಾಗಿ ಹೊರತೆಗೆದು ಉಂಟಾಗಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಆಡಳಿತಗಳು ಯೋಜನೆ ರೂಪಿಸುತ್ತಿವೆ.

ಮುಳುಗುತಜ್ಞರು ಮುಳುಗಿರುವ ಹಡಗಿನ ಬಳಿ ಸಾಗಿದ್ದಾರೆ. ವೈಮಾನಿಕ ಸಮೀಕ್ಷೆ ನಡೆಸಲಾಗಿದೆ.

ತೈಲ ಸೋರಿಕೆ ಆಗುತ್ತಿರುವುದು ನಿಜ, ಅತ್ಯಲ್ಪ ಪ್ರಮಾಣದಲ್ಲಿ ತೈಲ ಸೋರಿಕೆ ಆಗುತ್ತಿದೆ. ಹೀಗಾಗಿ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಕರಾವಳಿ ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.