ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ದೀ‌ವ್ಸ್‌ ಕಣ್ಗಾವಲಿಗೂ ಬಾಹ್ಯ ರಾಷ್ಟ್ರಕ್ಕೂ ಸಂಬಂಧವಿಲ್ಲ: ಮೊಹಮದ್‌ ಮುಯಿಝು

Published 17 ಮಾರ್ಚ್ 2024, 21:35 IST
Last Updated 17 ಮಾರ್ಚ್ 2024, 21:35 IST
ಅಕ್ಷರ ಗಾತ್ರ

ಮಾಲೆ: ಮಾಲ್ದೀವ್ಸ್‌ನ ರಕ್ಷಣೆಗಾಗಿ ಡ್ರೋನ್‌ ನಿಯೋಜನೆ ಸೇರಿದಂತೆ ರಕ್ಷಣಾ ಪಡೆಗಳನ್ನು ಹೆಚ್ಚಳ ಮಾಡಿರುವ ಅಧ್ಯಕ್ಷ ಮೊಹಮದ್‌ ಮುಯಿಝು ಅವರು ‘ಮಾಲ್ದೀವ್ಸ್‌ ಕಣ್ಗಾವಲಿಗೂ ಬಾಹ್ಯ ರಾಷ್ಟ್ರಗಳಿಗೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ. 

ಇಲ್ಲಿನ ಅಧ್ಯಕ್ಷರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಲ್ದೀವ್ಸ್‌ ರಾಷ್ಟ್ರೀಯ ರಕ್ಷಣಾ ಪಡೆಯ ಏರ್‌ ಕಾರ್ಪ್ಸ್‌ ಮತ್ತು ಮಾನವರಹಿತ ವಿಮಾನಗಳ (ಯುಎವಿ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮಾಲ್ದೀವ್ಸ್‌ ಸಣ್ಣ ರಾಷ್ಟ್ರವಲ್ಲ. 9 ಲಕ್ಷ ಚದರ ಕಿ.ಮೀನಷ್ಟು ಪ್ರದೇಶ ಹೊಂದಿರುವ ಅದಕ್ಕೆ (ಮಾಲ್ದೀವ್ಸ್‌ಗೆ) ತನ್ನನ್ನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯವಿದೆ’ ಎಂದಿದ್ದಾರೆ.

‘ಮಾಲ್ದೀವ್ಸ್‌ ಒಂದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ. ಕಣ್ಗಾವಲು ಹೆಚ್ಚಳದಿಂದ ನಮ್ಮ ಆಪ್ತ ರಾಷ್ಟ್ರಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಕರಾವಳಿಯ ಕಾವಲು ಪೆಡೆಯನ್ನು ಸರ್ಕಾರ ದ್ವಿಗುಣಗೊಳಿಸಲಿದೆ. ನಾವು ವಾಯು ಪಡೆಯನ್ನು ವಿಸ್ತರಿಸಲಿದ್ದೇವೆ’ ಎಂದೂ ಅವರು ತಿಳಿಸಿದರು.

ಭಾರತ ಮಾಲ್ದೀವ್ಸ್‌ಗೆ ಉಡುಗೊರೆಯಾಗಿ ನೀಡಿದ್ದ ಹೆಲಿಕಾಪ್ಟರ್‌ನ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಭಾರತೀಯ ಸೇನಾ ಸಿಬ್ಬಂದಿಯ ಮೊದಲನೇ ತಂಡವು ದ್ವೀಪ ರಾಷ್ಟ್ರದಿಂದ ಹೊರಬಂದ ಕೆಲವೇ ದಿನಗಳ ಬಳಿಕ ಮುಯಿಝು ಈ ಹೇಳಿಕೆ ನೀಡಿದ್ದಾರೆ.

ಮುಯಿಝು ಅವರು ಚೀನಾ ಪರ ಒಲವು ಹೊಂದಿದವರಾಗಿದ್ದು, ತಾವು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಮಾಲ್ದೀವ್ಸ್‌ನಲ್ಲಿದ್ದ 90 ಭಾರತೀಯ ಸೇನಾ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತಕ್ಕೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT