ವಿಶ್ವಸಂಸ್ಥೆ: ವಿಶ್ವ ಪರಂಪರೆ ಸಮಿತಿಯು ಆಫ್ರಿಕಾ ಖಂಡದ ಮಡಗಾಸ್ಕರ್, ಈಜಿಪ್ಟ್ ಮತ್ತು ಲಿಬಿಯಾದಲ್ಲಿರುವ ಮೂರು ಪರಂಪರಾ ಸ್ಥಳಗಳನ್ನು ಅಪಾಯದಲ್ಲಿರುವ ತಾಣಗಳ ಪಟ್ಟಿಯಿಂದ ತೆಗೆದುಹಾಕಿದೆ.

ವಿಶ್ವಸಂಸ್ಥೆಯ ಯುನೆಸ್ಕೊ ಈ ಬಗ್ಗೆ ಮಾಹಿತಿ ನೀಡಿದೆ.

ಫ್ರಾನ್ಸ್ ದೇಶದ ಪ್ಯಾರಿಸ್ನಲ್ಲಿ ನಡೆಯುತ್ತಿರುವ ವಿಶ್ವ ಪರಂಪರೆ ಸಮಿತಿ (WHC)ಯ 47ನೇ ಅಧಿವೇಶನದಲ್ಲಿ ಬುಧವಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಯುನೆಸ್ಕೊ ಹೇಳಿದೆ.

ಮಡಗಾಸ್ಕರ್ನ ಮಳೆಕಾಡುಗಳು, ಈಜಿಪ್ಟ್ನ ಅಬು ಮೆನಾ ನಗರ ಮತ್ತು ಲಿಬಿಯಾದ ಘಡಾಮಸ್ನ ಹಳೆಯ ಪಟ್ಟಣವನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ನಾವು ಆಫ್ರಿಕಾದಲ್ಲಿರುವ ಪರಂಪರಾ ಸ್ಥಳಗಳ ರಕ್ಷಣೆಗೆ ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ. ಸ್ಥಳೀಯರಿಗೆ ತರಬೇತಿ ನೀಡಿ ಸಂರಕ್ಷಣೆಗೆ ಮುಂದಾಗಿದ್ದೇವೆ. ಕೆಲವು ತಾಣಗಳನ್ನು ಅಪಾಯದ ಪಟ್ಟಿಯಿಂದ ಹೊರತರಲು ನಾನಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ. ಈ ಪ್ರಯತ್ನಗಳು ಫಲ ನೀಡುತ್ತಿವೆ ಎಂದು ಯುನೆಸ್ಕೊ ನಿರ್ದೇಶಕಿ ಆ್ಯಡ್ರೆ ಅಜೌಲೆ ಹೇಳಿದ್ದಾರೆ.
.ಭಗವದ್ಗೀತೆ, ನಾಟ್ಯಶಾಸ್ತ್ರಕ್ಕೆ ಯುನೆಸ್ಕೊ ಮನ್ನಣೆ.ಒಡಿಶಾದ 24 ಹಳ್ಳಿಗಳು ಸುನಾಮಿ ಎದುರಿಸಲು ಸನ್ನದ್ಧ: ಯುನೆಸ್ಕೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.