ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ನಡೆದ ಜಾಫರ್ ಎಕ್ಸ್ಪ್ರೆಸ್ ರೈಲಿನಲ್ಲಿ ಗುಂಡಿನ ದಾಳಿಯ ಹೊಣೆಹೊತ್ತುಕೊಂಡಿರುವ ನಿಷೇಧಿತ ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್ಎ) ಈ ಪ್ರಾಂತ್ಯದಲ್ಲಿ ಪ್ರಮುಖ ಭಯೋತ್ಪಾದಕ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಸುಮಾರು 450 ಪ್ರಯಾಣಿಕರಿದ್ದ ಜಾಫರ್ ಎಕ್ಸ್ಪ್ರೆಸ್ ಹೆಸರಿನ ರೈಲು ಕ್ವೆಟ್ಟಾದಿಂದ ಪೆಶಾವರ ಕಡೆ ಮಂಗಳವಾರ(ಮಾರ್ಚ್ 11) ತೆರಳುತ್ತಿತ್ತು. ಆಗ ಸ್ಫೋಟಕ ಬಳಸಿ ರೈಲಿನ ಹಳಿ ತಪ್ಪಿಸಿದ್ದ ಉಗ್ರರು, ರೈಲಿಗೆ ನುಗ್ಗಿ ಪ್ರಯಾಣಿಕರನ್ನು ಒತ್ತೆ ಇರಿಸಿಕೊಂಡಿದ್ದರು. ಬುಧವಾರ ತಡರಾತ್ರಿ ಕೊನೆಗೊಂಡ ಎರಡು ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ 340ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿದ್ದವು.

21 ಒತ್ತೆಯಾಳುಗಳು ಮತ್ತು ನಾಲ್ವರು ಯೋಧರನ್ನು ಉಗ್ರರು ಕೊಂದಿದ್ದಾರೆ. ಕಾರ್ಯಾಚರಣೆ ವೇಳೆ 33 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನದ ಸೇನೆಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು. ಈ ದಾಳಿಯ ಹೊಣೆಯನ್ನು ಬಿಎಲ್ಎ ಹೊತ್ತುಕೊಂಡಿದೆ.

ಬುಧವಾರ ಡಾನ್ ಪತ್ರಿಕೆಯ ಪ್ರಿಸಮ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ, 2024ರಲ್ಲಿ ಬಿಎಲ್ಎ ನಡೆಸಿದ ಸಂಯೋಜಿತ ಭಯೋತ್ಪಾದಕ ದಾಳಿಗಳಲ್ಲಿ ಒಟ್ಟು 225 ಮಂದಿ ಸಾವಿಗೀಡಾಗಿದ್ದಾರೆ.

ನಿಷೇಧಿತ ಬಲೂಚ್ ದಂಗೆಕೋರ ಗುಂಪುಗಳು, ಮುಖ್ಯವಾಗಿ ಬಿಎಲ್ಎ ಮತ್ತು ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್ಎಫ್) ನಡೆಸಿದ ದಾಳಿಗಳು ಶೇ 119ರಷ್ಟು ಹೆಚ್ಚಾಗಿದ್ದು, ಬಲೂಚಿಸ್ತಾನದಲ್ಲಿ 171 ದಾಳಿಗಳು ನಡೆದಿವೆ ಎಂದು ಅದು ಹೇಳಿದೆ.
.Pakistan Train Attack | 190 ಪ್ರಯಾಣಿಕರ ರಕ್ಷಣೆ, 30 ಉಗ್ರರ ಹತ್ಯೆ.
2024ರಿಂದ ಈವರೆಗೆ ಬಿಎಲ್ಎ ನಡೆಸಿದ ಪ್ರಮುಖ ದಾಳಿಗಳ ಮಾಹಿತಿ ಇಲ್ಲಿದೆ.

2024ರ ಜನವರಿ 30

ಪ್ರಾಂತೀಯ ರಾಜಧಾನಿ ಕ್ವೆಟ್ಟಾದಿಂದ 70 ಕಿ.ಮೀ. ದೂರದಲ್ಲಿರುವ ಬಲೂಚಿಸ್ತಾನದ ಮ್ಯಾಕ್ ಪಟ್ಟಣದಲ್ಲಿ ಬಿಎಲ್ಎ ರಾಕೆಟ್ಗಳು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಮೂರು ಸಂಘಟಿತ ದಾಳಿಗಳನ್ನು ನಡೆಸಿತ್ತು. ಭದ್ರತಾ ಪಡೆಗಳು ಮತ್ತು ದಾಳಿಕೋರರ ನಡುವೆ ಸುಮಾರು ಮೂರು ದಿನಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ 24 ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನೆ ತಿಳಿಸಿತ್ತು. ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಮತ್ತು ಇಬ್ಬರು ನಾಗರಿಕರು ಸಹ ಮೃತಪಟ್ಟಿದ್ದರು.

2024ರ ಮಾರ್ಚ್ 20

ಬಿಎಲ್ಎಗೆ ಸೇರಿದ 8 ಮಂದಿ ಭಯೋತ್ಪಾದಕರು, ಗ್ವಾದರ್ ಬಂದರು ಪ್ರಾಧಿಕಾರದ ಕಾಲೋನಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದರು. ಸೇನೆಯ ಹೇಳಿಕೆಯ ಪ್ರಕಾರ, ಸೇನೆಯೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಎಲ್ಲಾ 8 ಮಂದಿ ಭಯೋತ್ಪಾದಕರು ಮೃತಪಟ್ಟು, ಇಬ್ಬರು ಸೈನಿಕರು ಹುತಾತ್ಮರಾಗಿದ್ದರು.

2024ರ ಮಾರ್ಚ್ 26

ಪಾಕಿಸ್ತಾನದ ಅತಿದೊಡ್ಡ ನೌಕಾ ವಾಯುನೆಲೆಗಳಲ್ಲಿ ಒಂದಾದ ಪಿಎನ್ಎಸ್ ಸಿದ್ದಿಕ್ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಯೋಜಿಸಿದ್ದು, ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಟರ್ಬತ್ ವಿಮಾನ ನಿಲ್ದಾಣದ ಗಡಿಯ ಹೊರಗೆ ನಡೆದ ಕಾರ್ಯಾಚರಣೆಯಲ್ಲಿ 6 ಮಂದಿ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದ್ದರು.

2024ರ ಏಪ್ರಿಲ್ 13

ನೋಶ್ಕಿ ಬಳಿ ಪಂಜಾಬ್ ಮೂಲದ 9 ಮಂದಿ ಪ್ರಯಾಣಿಕರನ್ನು ಬಸ್ನಿಂದ ಅಪಹರಿಸಿದ್ದ ಬಂದೂಕುಧಾರಿಗಳು ಅವರನ್ನು ಹತ್ಯೆಗೈದಿದ್ದರು. ಅಲ್ಲದೆ ಮತ್ತೊಂದು ಕಾರಿನಲ್ಲಿದ್ದ ಇಬ್ಬರನ್ನು ಬಂದೂಕುಧಾರಿಗಳು ಕೊಂದಿದ್ದರು.

2024ರ ಮೇ 10

ಗ್ವಾದರ್ನ ಪೂರ್ವದಲ್ಲಿರುವ ಕರಾವಳಿ ಪಟ್ಟಣವಾದ ಸರ್ಬಂದನ್ನಲ್ಲಿ ನಿದ್ದೆಯಲ್ಲಿದ್ದ ಪಂಜಾಬ್ನ ಏಳು ಕಾರ್ಮಿಕರನ್ನು ಹತ್ಯೆ ಮಾಡಲಾಗಿತ್ತು. ಹತ್ಯೆಯ ನಂತರ, ಬಲೂಚಿಸ್ತಾನ ಸರ್ಕಾರ ಇಬ್ಬರು ಶಂಕಿತರನ್ನು ಬಂಧಿಸಿದ್ದಾಗಿ ಘೋಷಿಸಿತ್ತು. ಬಂಧಿತರು ಇಬ್ಬರೂ ಬಿಎಲ್ಎ ಜೊತೆ ಸಂಬಂಧ ಹೊಂದಿದ್ದಾರೆಂದು ಭಯೋತ್ಪಾದನಾ ನಿಗ್ರಹ ಇಲಾಖೆ ಹೇಳಿತ್ತು.

2024ರ ಜೂನ್ 27

ಕಲಾತ್ನಲ್ಲಿರುವ ಪಾಕಿಸ್ತಾನ ಪೆಟ್ರೋಲಿಯಂ ಲಿಮಿಟೆಡ್ (ಪಿಪಿಎಲ್) ತೈಲ ಮತ್ತು ಅನಿಲ ಪರಿಶೋಧನಾ ಘಟಕದಲ್ಲಿ ಕಾವಲು ಕಾಯುತ್ತಿದ್ದ ಫ್ರಾಂಟಿಯರ್ ಕಾರ್ಪ್ಸ್ (ಎಫ್ಸಿ) ಚೆಕ್ ಪೋಸ್ಟ್ ಮೇಲೆ ಸುಮಾರು 50 ಭಯೋತ್ಪಾದಕರು ದಾಳಿ ನಡೆಸಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದರು.

2024ರ ಆಗಸ್ಟ್ 13

ಪಂಜ್ಗುರ್ನ ಉಪ ಆಯುಕ್ತ ಜಾಕಿರ್ ಹುಸೇನ್ ಬಲೋಚ್ ಅವರು, ಮಸ್ತುಂಗ್ ಬಳಿಯ ಕ್ವೆಟ್ಟಾ-ಕರಾಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಅವರ ವಾಹನದ ಮೇಲೆ ದಾಳಿ ಮಾಡಲಾಗಿತ್ತು. ದಾಳಿಯಲ್ಲಿ ಅವರು ಮೃತಪಟ್ಟಿದ್ದರು. ದಾಳಿಯ ಹಿಂದೆ ಬಿಎಲ್ಎ ಕೈವಾಡವಿದೆ ಎಂದು ಬಲೂಚಿಸ್ತಾನ ಸರ್ಕಾರ ಹೇಳಿತ್ತು.

2024ರ ಆಗಸ್ಟ್ 26-27

ಬಲೂಚಿಸ್ತಾನ ತನ್ನ ಇತಿಹಾಸದಲ್ಲಿ ಕಂಡ ಅತ್ಯಂತ ಹಿಂಸಾತ್ಮಕ ಘಟನೆ ಇದು. ಬಿಎಲ್ಎ ಭಯೋತ್ಪಾದಕರು ಪೊಲೀಸ್ ಠಾಣೆಗಳಿಗೆ ನುಗ್ಗಿ, ರೈಲ್ವೆ ಹಳಿಗಳನ್ನು ಸ್ಫೋಟಿಸಿ, ಸುಮಾರು ಮೂರು ಡಜನ್ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪ್ರಾಂತ್ಯದ ವಿವಿಧ ಭಾಗಗಳಲ್ಲಿ ನಡೆದ ದಾಳಿಗಳಲ್ಲಿ 14 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 50 ಜನ ಪ್ರಾಣ ಕಳೆದುಕೊಂಡಿದ್ದರು.

2024ರ ಅಕ್ಟೋಬರ್ 7

ಕರಾಚಿ ವಿಮಾನ ನಿಲ್ದಾಣದ ಹೊರಗೆ ಚೀನಾದ ಬೆಂಗಾವಲು ಪಡೆಯ ಮೇಲೆ ತಡರಾತ್ರಿ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಚೀನಾದ ಕಾರ್ಮಿಕರು ಮೃತಪಟ್ಟು, 8 ಮಂದಿ ಗಾಯಗೊಂಡಿದ್ದರು.

2024ರ ಅಕ್ಟೋಬರ್ 30

ಪಂಜಗುರ್ ಜಿಲ್ಲೆಯಲ್ಲಿ ಅಣೆಕಟ್ಟು ನಿರ್ಮಾಣ ಸ್ಥಳದಲ್ಲಿ ನಿಯೋಜಿಸಲಾದ ಐದು ಖಾಸಗಿ ಭದ್ರತಾ ಸಿಬ್ಬಂದಿಯನ್ನು ಬಿಎಲ್ಎ ಜೊತೆ ಸಂಬಂಧ ಹೊಂದಿದ್ದ ಭಯೋತ್ಪಾದಕರು ಹತ್ಯೆಗೈದಿದ್ದರು.

2024ರ ನವೆಂಬರ್ 9

ಕರಾಚಿಯ ಕ್ವೆಟ್ಟಾದಲ್ಲಿ ರೈಲು ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 16 ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 26 ಜನ ಮೃತಪಟ್ಟು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

2024ರ ನವೆಂಬರ್ 17

ಕಲಾತ್ನ ಜೋಹಾನ್ ಪ್ರದೇಶದ ಚೆಕ್ ಪೋಸ್ಟ್ ಮೇಲೆ ಬಿಎಲ್ಎ ನಡೆಸಿದ್ದ ದಾಳಿಯಲ್ಲಿ 7 ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟು 18 ಜನ ಗಾಯಗೊಂಡಿದ್ದರು. ಈ ವೇಳೆ ನಡದ ಕಾರ್ಯಾಚರಣೆಯಲ್ಲಿ 6 ಭಯೋತ್ಪಾದಕರನ್ನು ಕೊಂದಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಸೇನೆ ಹೇಳಿತ್ತು.

2025ರ ಜನವರಿ 5

ಟರ್ಬತ್ನಲ್ಲಿ ಸ್ಫೋಟಕ ತುಂಬಿದ ವಾಹನವು ಸೈನಿಕರನ್ನು ಸಾಗಿಸುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಫ್ರಾಂಟಿಯರ್ ಕಾರ್ಪ್ಸ್ (ಎಫ್ಸಿ) ಸಿಬ್ಬಂದಿ ಸೇರಿದಂತೆ ಕನಿಷ್ಠ 6 ಜನ ಮೃತಪಟ್ಟಿದ್ದರು. ಮಕ್ಕಳು ಸೇರಿದಂತೆ 35 ಜನ ಗಾಯಗೊಂಡಿದ್ದರು.

2025ರ ಜನವರಿ 9

ಖುಜ್ದಾರ್ನ ಜೆಹ್ರಿ ಜಿಲ್ಲೆಯ ಪ್ರಮುಖ ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ ಬಿಎಲ್ಎ ಭಯೋತ್ಪಾದಕರು, ಹಲವಾರು ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದರು. ಬಳಿಕ ಖಾಸಗಿ ಬ್ಯಾಂಕ್ ಶಾಖೆಯ ಮೇಲೆ ದಾಳಿ ಮಾಡಿ , ಸಿಬ್ಬಂದಿಯನ್ನು ಒತ್ತೆಯಾಳಾಗಿಟ್ಟುಕೊಂಡು 90 ಮಿಲಿಯನ್ಗಿಂತಲೂ ಅಧಿಕ ಹಣ ಲೂಟಿ ಮಾಡಿದ್ದರು ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದರು.

2025ರ ಫೆಬ್ರುವರಿ 1

ಕಲಾತ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 18 ಸೈನಿಕರು ಮೃತಪಟ್ಟಿದ್ದರು. ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ 12 ಮಂದಿ ಭಯೋತ್ಪಾದಕರು ಹತರಾಗಿದ್ದರು.

2025ರ ಫೆಬ್ರುವರಿ 19

ಬರ್ಖಾನ್ ಜಿಲ್ಲೆಯಲ್ಲಿ ಪಂಜಾಬ್ಗೆ ಪ್ರಯಾಣಿಸುತ್ತಿದ್ದ ಬಸ್ ಅನ್ನು ತಡೆದ ಬಂದೂಕುಧಾರಿಗಳು ಬಸ್ನಲ್ಲಿದ್ದ ಏಳು ಜನರನ್ನು ಗುಂಡು ಹಾರಿಸಿ ಕೊಂದಿದ್ದರು.

2025ರ ಮಾರ್ಚ್ 3

ಕಲಾತ್ನಲ್ಲಿ ಮಹಿಳಾ ಬಾಂಬರ್ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯೊಬ್ಬರು ಮೃತಪಟ್ಟು, ಇತರ ನಾಲ್ವರು ಗಾಯಗೊಂಡಿದ್ದರು.
.Pakistan Train Attack | ಪಾಕ್ ರೈಲು ಮೇಲಿನ ದಾಳಿ: 25 ಶವ ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.