ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ‘ಲೂನಾ–25’ ನೌಕೆ ಪತನ: ಹಿರಿಯ ವಿಜ್ಞಾನಿ ಆಸ್ಪತ್ರೆಗೆ ದಾಖಲು

Published 22 ಆಗಸ್ಟ್ 2023, 4:57 IST
Last Updated 22 ಆಗಸ್ಟ್ 2023, 4:57 IST
ಅಕ್ಷರ ಗಾತ್ರ

ಮಾಸ್ಕೊ: ಚಂದ್ರನ ಮೇಲ್ಮೈ ಮೇಲೆ ಇಳಿಯುವ ಮೊದಲೇ ರಷ್ಯಾದ ‘ಲೂನಾ –25’ ಬಾಹ್ಯಾಕಾಶ ನೌಕೆ ಪತನಗೊಂಡ ನಂತರ ಈ ಮಿಷನ್‌ನಲ್ಲಿ ಕೆಲಸ ಮಾಡಿದ್ದ ಹಿರಿಯ ವಿಜ್ಞಾನಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ ಲ್ಯಾಂಡ್‌ ಮಾಡಲು ರಷ್ಯಾ ‘ಲೂನಾ–25’ ನೌಕೆಯನ್ನು ಆಗಸ್ಟ್‌ 11ರಂದು ಉಡಾವಣೆ ಮಾಡಿತ್ತು. ಆದರೆ ನೌಕೆ ತಾಂತ್ರಿಕ ಕಾರಣಗಳಿಂದ ಪತನವಾಗಿತ್ತು.

‘ಲೂನಾ –25’ ನೌಕೆ ಪತನಗೊಂಡ ಕೆಲವೇ ಗಂಟೆಗಳಲ್ಲಿ ವಿಜ್ಞಾನಿ ಮಿಖಾಯಿಲ್ ಮರೋವ್ ಆರೋಗ್ಯದಲ್ಲಿ ಏರು–ಪೇರಾಗಿ ಆಸ್ಪತ್ರಗೆ ದಾಖಲಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ‘ಇಂಡಿಪೆಂಡೆಂಟ್‌‘ ವರದಿ ಮಾಡಿದೆ. 

ಮಿಖಾಯಿಲ್ ಮರೋವ್ ಅವರ ಆರೋಗ್ಯ ಕುರಿತಾಗಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳಿರುವ ಕುರಿತು ಅನ್ವೇಷಣೆ ನಡೆಸುವ ಉದ್ದೇಶದಿಂದ ‘ಲೂನಾ–25’ ನೌಕೆಯನ್ನು  ರಷ್ಯಾ ಉಡಾವಣೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT