ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಹಾನಸ್‌ಬರ್ಗ್ | ವಿಷಾನಿಲ ಸೋರಿಕೆಯಾಗಿ ಒಂದು ವರ್ಷದ ಮಗು ಸೇರಿ 17 ಮಂದಿ ಸಾವು‌

Published 6 ಜುಲೈ 2023, 13:37 IST
Last Updated 6 ಜುಲೈ 2023, 13:37 IST
ಅಕ್ಷರ ಗಾತ್ರ

ಜೊಹಾನಸ್‌ಬರ್ಗ್:‌ ವಿಷಕಾರಿ ನೈಟ್ರೇಟ್ ಅನಿಲ ಸೋರಿಕೆಯಿಂದ ಒಂದು ವರ್ಷದ ಮಗು  ಸೇರಿದಂತೆ 17 ಜನರು ಮೃತಪಟ್ಟಿದ್ದು, ಹತ್ತು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೋಕ್ಸ್‌ಬರ್ಗ್ ನಗರದ ಬಳಿಯ ಗಣಿಯಲ್ಲಿ ಅಕ್ರಮವಾಗಿ ಚಿನ್ನ ಹೊರತೆಗೆಯುವ ವೇಳೆ ಈ ಘಟನೆ ನಡೆದಿದೆ. 

ಗೌಟೆಂಗ್ ಪ್ರಾಂತ್ಯದ ಪ್ರಧಾನ ಮಂತ್ರಿ ಪನ್ಯಾಜಾ ಲೆಸುಫಿ ಮಾತನಾಡಿ, ‘ಈ ಘಟನೆ ನೋವು ಉಂಟು ಮಾಡಿದೆ.  ಈ ಪ್ರದೇಶದಲ್ಲಿ ಮುಚ್ಚಿದ ಗಣಿಯಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದವರು ಮೃತಪಟ್ಟಿದ್ದಾರೆ ’ ಎಂದರು.

ಧೂಳು ಮತ್ತು ಕಲ್ಲುಗಳಿಂದ ಚಿನ್ನವನ್ನು ಪ್ರತ್ಯೇಕಿಸಲು ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದವರು ಈ  ಅನಿಲವನ್ನು ಬಳಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.  ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT