ವಾಷಿಂಗ್ಟನ್: ಯಾವುದಾದರೊಂದು ವಿಚಾರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಜೈಲಿನಲ್ಲಿ ಇರುವಂತೆ ಕಾಣುವ ಎಐ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಎಐ ವಿಡಿಯೊದಲ್ಲಿ, ಒಬಾಮ ಅವರು ‘ವಿಶೇಷವಾಗಿ ಅಧ್ಯಕ್ಷರು ಕಾನೂನಿಗಿಂತ ದೊಡ್ಡವರು’ ಎನ್ನುತ್ತಾರೆ. ನಂತರ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್ ಸಹಿತ ಹಲವು ರಾಜಕೀಯ ನಾಯಕರ ಫೋಟೊವನ್ನು ತೋರಿಸಲಾಗುತ್ತದೆ, ಬೈಡನ್ ಅವರು ‘ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ’ ಎನ್ನುತ್ತಾರೆ. ಮುಂದುವರಿದ ವಿಡಿಯೊದಲ್ಲಿ ಟ್ರಂಪ್ ಮತ್ತು ಒಬಾಮ ಶ್ವೇತಭವನದಲ್ಲಿ ಕುಳಿತಿರುತ್ತಾರೆ. ಆಗ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ನ ಅಧಿಕಾರಿಗಳು ಒಬಾಮ ಅವರ ಕೈಗಳಿಗೆ ಕೋಳ ಹಾಕಿ ಕರೆದೊಯ್ಯುತ್ತಾರೆ. ವಿಡಿಯೊದ ಕೊನೆಯಲ್ಲಿ ಒಬಾಮ ಕೇಸರಿ ಬಣ್ಣದ ಉಡುಗೆಯಲ್ಲಿ ಜೈಲಿನೊಳಗೆ ಇರುವಂತೆ ತೋರಿಸಲಾಗಿದೆ.

ಆದರೆ ಈ ವಿಡಿಯೊ ಕುರಿತು ಟ್ರಂಪ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವಿಡಿಯೊದ ಮೇಲೆ ‘ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ’ ಎಂದು ಬರೆದುಕೊಂಡಿದ್ದಾರೆ

2016ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಗೆಲುವಿನಲ್ಲಿ ರಷ್ಯಾದ ಪ್ರಭಾವವಿದ್ದು, ಒಬಾಮ ಆಡಳಿತವನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಈ ಹಿಂದೆ ಹೇಳಿಕೆ ನೀಡಿದ್ದರು.

ತುಳಸಿ ಅವರ ಹೇಳಿಕೆ ಬಂದ ಕೆಲವೇ ದಿನಗಳಲ್ಲಿ ಟ್ರಂಪ್, ಒಬಾಮ ಅವರನ್ನು ಬಂಧಿಸುವ ರೀತಿಯ ಎಐ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.