ನ್ಯೂಯಾರ್ಕ್/ ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ ರಕ್ಷಣಾ ನೀತಿ ಮಸೂದೆಗೆ ಸಹಿ ಹಾಕಿದ್ದು, ಇದು ಕಾಯ್ದೆಯಾಗಿ ಜಾರಿಗೆ ಬರಲಿದೆ.

ಇಂಡೊ-ಪೆಸಿಫಿಕ್ ಪ್ರದೇಶದ ಮುಕ್ತ ವಾತಾವರಣಕ್ಕೆ ಬದ್ಧವಾದ ಉದ್ದೇಶವನ್ನು ವ್ಯಕ್ತಪಡಿಸಲು ಮತ್ತು ಚೀನಾ ಒಡ್ಡುವ ಸವಾಲುಗಳನ್ನು ಪರಿಹರಿಸಲು ಭಾರತದೊಂದಿಗೆ ಅಮೆರಿಕದ ಸಂಬಂಧವನ್ನು ವಿಸ್ತರಿಸುವ ಗುರಿಯನ್ನು ಈ ಮಸೂದೆ ಹೊಂದಿದೆ.

2026ನೇ ಹಣಕಾಸು ವರ್ಷದ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯ್ದೆಗೆ ಗುರುವಾರ ಸಹಿ ಮಾಡಲಾಗಿದೆ. ಈ ಕಾಯ್ದೆಯು ಯುದ್ಧ ಇಲಾಖೆ (ಡಿಒಡಬ್ಲ್ಯು), ಇಂಧನ ಇಲಾಖೆಯ ರಾಷ್ಟ್ರೀಯ ಭದ್ರತಾ ಕಾರ್ಯಕ್ರಮಗಳು, ವಿದೇಶಾಂಗ ಇಲಾಖೆ, ಗೃಹ ಭದ್ರತಾ ಇಲಾಖೆ, ಗುಪ್ತಚರ ಮತ್ತು ಇತರ ಕಾರ್ಯನಿರ್ವಾಹಕ ಇಲಾಖೆಗಳು ಹಾಗೂ ಏಜೆನ್ಸಿಗಳಿಗೆ ಹಣಕಾಸು ವಿನಿಯೋಗಕ್ಕೆ ಅಧಿಕಾರ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.