ವಾಷಿಂಗ್ಟನ್: 19 ವರ್ಷದ ಒಳಗೆ ಲಿಂಗ ಪರಿವರ್ತಿಸಿಕೊಳ್ಳುವುದನ್ನು ನಿಷೇಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಹಿ ಹಾಕಿದ್ದಾರೆ.

‘ಒಂದು ಲಿಂಗದಿಂದ ಇನ್ನೊಂದು ಲಿಂಗಕ್ಕೆ ಪರಿವರ್ತನೆ ಆಗುವುದಕ್ಕೆ ಅಮೆರಿಕವು ಯಾವುದೇ ಅನುದಾನ ನೀಡುವುದಿಲ್ಲ. ಇಂಥ ಚಿಕಿತ್ಸೆಯ ಬಗ್ಗೆ ಪ್ರಚಾರವನ್ನಾಗಲಿ, ಸಹಕಾರವನ್ನಾಗಲಿ ಅಮೆರಿಕ ನೀಡುವುದಿಲ್ಲ. ಲಿಂಗಪರಿವರ್ತನೆಯನ್ನು ನಿಷೇಧಿಸುವ ಎಲ್ಲ ರೀತಿಯ ಕಾನೂನು, ನಿಯಮಗಳನ್ನು ಅಮೆರಿಕ ಜಾರಿ ಮಾಡಲಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ಲಿಂಗ ಪರಿವರ್ತನೆಗಾಗಿ, ಲಿಂಗ ಪರಿವರ್ತಿತ ವ್ಯಕ್ತಿಗಳ ರಕ್ಷಣೆಗಾಗಿ ಮಾಜಿ ಅಧ್ಯಕ್ಷ ಜೋ ಬೈಡನ್ ಅವರು ರೂಪಿಸಿದ್ದ ನೀತಿಗೆ ಸಂಪೂರ್ಣ ವಿರುದ್ಧವಾಗಿರುವ ನೀತಿಯನ್ನು ಟ್ರಂಪ್ ಘೋಷಿಸಿದ್ದಾರೆ. ಬೈಡನ್ ಅವರ ನೀತಿಗಳಿಗೆ ಸಂಪೂರ್ಣ ವಿರುದ್ಧವಾಗಿ ನೀತಿಗಳನ್ನು ಟ್ರಂಪ್ ಘೋಷಿಸುತ್ತಿದ್ದಾರೆ. ಈ ಹೊಸ ಘೋಷಣೆಗಳ ಪಟ್ಟಿಗೆ ಲಿಂಗ ಪರಿವರ್ತನೆ ಮೇಲಿನ ನಿಷೇಧ ನೀತಿಯು ಹೊಸ ಸೇರ್ಪಡೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.