ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧ

Last Updated 1 ಮಾರ್ಚ್ 2020, 14:42 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್‌ನಲ್ಲಿ ಕೋವಿಡ್‌–19 ಸೋಂಕು ಮೊದಲ ಬಲಿ ಪಡೆದಿದ್ದು, ಈ ಘಟನೆ ಬೆನ್ನಲ್ಲೇಇರಾನ್‌ನಿಂದ ಅಮೆರಿಕಕ್ಕೆ ಆಗಮಿಸುವುದನ್ನು ನಿರ್ಬಂಧಿಸಲಾಗಿದೆ.

ಜೊತೆಗೆದಕ್ಷಿಣ ಕೊರಿಯಾ ಹಾಗೂ ಇಟಲಿಯ ಕೆಲ ಪ್ರದೇಶಗಳಿಗೆ ಪ್ರಯಾಣಿಸದಂತೆ ಜನರಿಗೆ ಸಲಹೆ ನೀಡಿದೆ. ‘ದುರದೃಷ್ವವಶಾತ್‌, ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿನ ಪ್ರಕರಣಗಳು ಮತ್ತಷ್ಟು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸೋಂಕು ಎದುರಿಸಲು ಅಮೆರಿಕ ಸಜ್ಜಾಗಿದೆ.ಜನರು ಗಾಬರಿಗೊಳ್ಳಬೇಡಿ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೃತಪಟ್ಟವರು ಮಹಿಳೆ ಎಂದು ಟ್ರಂಪ್‌ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು, ಆದರೆ ಮೃತಪಟ್ಟಿರುವುದು ಪುರುಷ ಎಂದು ರೋಗ ನಿಯಂತ್ರಣ ಕೇಂದ್ರ (ಸಿಡಿಸಿ) ಸ್ಪಷ್ಟನೆ ನೀಡಿದೆ. ಕಳೆದ 14 ದಿನಗಳಿಂದ ಇರಾನ್‌ಗೆ ಪ್ರಯಾಣಿಸಿರುವ ವಿದೇಶಿ ಪ್ರಜೆಗಳು ಅಮೆರಿಕ ಪ್ರವೇಶಿಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ‘ಇಲ್ಲಿಯವರೆಗೂ ಅಮೆರಿಕದಲ್ಲಿ 22 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ’ ಎಂದು ಸಿಡಿಸಿ ನಿರ್ದೇಶಕ ರಾಬರ್ಟ್‌ ರೆಡ್‌ಫೀಲ್ಡ್‌ ಮಾಹಿತಿ ನೀಡಿದ್ದಾರೆ.

2,870 ಜನರು ಬಲಿ (ಬೀಜಿಂಗ್‌)(ಪಿಟಿಐ): ‘ಕೋವಿಡ್‌ ಸೋಂಕಿಗೆ ಚೀನಾದಲ್ಲಿ ಶನಿವಾರ 35 ಜನರು ಮೃತಪಟ್ಟಿದ್ದು, ಒಟ್ಟಾರೆ ಸಾವಿನ ಸಂಖ್ಯೆ 2,870ಕ್ಕೆ ಏರಿಕೆಯಾಗಿದೆ. 79,824 ಜನರಲ್ಲಿ ಸೋಂಕು ದೃಢಪಟ್ಟಿದೆ. ಹ್ಯುಬೆ ಪ್ರಾಂತ್ಯದ ಹೊರಗೆ ಸೋಂಕು ವ್ಯಾಪಿಸುತ್ತಿರುವುದು ಇಳಿಕೆಯಾಗುತ್ತಿದೆ’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ತಿಳಿಸಿದೆ. ಶನಿವಾರ ಮೃತಪಟ್ಟವರ ಪೈಕಿ 34 ಜನ ಹ್ಯುಬೆ ಪ್ರಾಂತ್ಯದವರಾಗಿದ್ದು, ಒಬ್ಬರು ಹೆನನ್‌ ಪ್ರಾಂತ್ಯದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT