ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ಶಂಕಿತ ಕುರ್ದಿಸ್ತಾನ್‌ ವರ್ಕರ್ಸ್‌ ಪಾರ್ಟಿ ಉಗ್ರರ ಬಂಧನ

Published 3 ಅಕ್ಟೋಬರ್ 2023, 13:34 IST
Last Updated 3 ಅಕ್ಟೋಬರ್ 2023, 13:34 IST
ಅಕ್ಷರ ಗಾತ್ರ

ಅಂಕಾರಾ (ಟರ್ಕಿ): ಟರ್ಕಿ ರಾಜಧಾನಿ ಅಂಕಾರಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದ ಬೆನ್ನಲ್ಲೇ ಕುರ್ದಿಶ್‌ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೇಶದಾದ್ಯಂತ ಕನಿಷ್ಠ 67 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಆಂತರಿಕ ಭದ್ರತಾ ಸಚಿವ ಆಲಿ ಎರ್ಲಿಕಯಾ ಅವರು, ‘ಪೊಲೀಸರು ಟರ್ಕಿಯ 16 ಪ್ರಾಂತ್ಯಗಳಲ್ಲಿ ಶೋಧ ನಡೆಸಿ ನಿಷೇಧಿತ ಕುರ್ದಿಸ್ತಾನ್‌ ವರ್ಕರ್ಸ್‌ ಪಾರ್ಟಿ ಅಥವಾ ಪಿಕೆಕೆ ಜೊತೆ ಸಂಪರ್ಕ ಹೊಂದಿದ್ದ ಶಂಕೆಯ ಮೇಲೆ 55 ಮಂದಿಯನ್ನು ಬಂಧಿಸಿದ್ದಾರೆ. ಇನ್ನು ಇತರ ಐದು ಪ್ರಾಂತ್ಯಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕನಿಷ್ಠ 12 ಮಂದಿಯನ್ನು ಬಂಧಿಸಲಾಗಿದೆ’ ಎಂದು ‘ಎಕ್ಸ್‌’ ಜಾಲತಾಣದಲ್ಲಿ ತಿಳಿಸಿದ್ದಾರೆ.

ಭಾನುವಾರ, ಆಂತರಿಕ ಭದ್ರತಾ ಸಚಿವಾಲಯದ ಪ್ರವೇಶದ್ವಾರದ ಸಮೀಪ ಆತ್ಮಾಹುತಿ ಬಾಂಬ್‌ ದಾಳಿಕೋರ ಸ್ಫೋಟಕ ಸಾಧನ ಸ್ಫೋಟಿಸಿದ್ದ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿತ್ತು.  

‘ಪಿಕೆಕೆ’ಯನ್ನು ಅಮೆರಿಕ ಮತ್ತು ಯುರೋಪ್‌ ಒಕ್ಕೂಟ ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿವೆ.  ಇದು ಟರ್ಕಿಯಲ್ಲಿ ಬಂಡಾಯ ಆರಂಭಿಸಿದಾಗಿನಿಂದ ಅಂದರೆ 1984ರಿಂದ ಸಾವಿರಾರು ಜನರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT