ಇಸ್ತಾಂಬುಲ್: ‘ಟರ್ಕಿಯ ಪೂರ್ವಭಾಗದಲ್ಲಿ ಎರಡು ಬಾರಿ ಹಿಮಪಾತ ಉಂಟಾಗಿದ್ದು, ಮೃತರ ಸಂಖ್ಯೆ ಗುರುವಾರ 39ಕ್ಕೆ ಏರಿದೆ’ ಎಂದು ಟರ್ಕಿಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಮಂಗಳವಾರ ತಡರಾತ್ರಿ ಸಂಭವಿಸಿದ ಮೊದಲ ಹಿಮಪಾತದಲ್ಲಿ ಐವರು ಮೃತಪಟ್ಟು ಇಬ್ಬರು ನಾಪತ್ತೆಯಾಗಿದ್ದರು. ತುರ್ತು ಸೇವಾಪಡೆಯ ಸುಮಾರು 300 ಸಿಬ್ಬಂದಿ ವ್ಯಾನ್ ಪ್ರಾಂತ್ಯದಲ್ಲಿ ನಾಪತ್ತೆಯಾಗಿರುವವರನ್ನು ಹುಡುಕಲು ಕಾರ್ಯಾಚರಣೆ ನಡೆಸುತ್ತಿದ್ದರು.

‘ಬುಧವಾರ ಎರಡನೇ ಬಾರಿಗೆ ಹಿಮಪಾತ ಸಂಭವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದ ತಂಡ ಇದರಡಿಯಲ್ಲಿ ಹೂತುಹೋಗಿತ್ತು. ರಕ್ಷಣಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿದಂತೆ 33 ಜನರ ದೇಹಗಳನ್ನು ಹೊರತೆಗೆಯಲಾಗಿದೆ’ ಎಂದು ಸರ್ಕಾರದ ವಿಪತ್ತು ನಿರ್ವಹಣಾ ಸಂಸ್ಥೆ ಎಎಫ್‌ಎಡಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.