ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ವಂಚನೆ: ಅಮೆರಿಕದಲ್ಲಿ ಭಾರತೀಯ ಮೂಲದ ಇಬ್ಬರ ಬಂಧನ

Published 30 ಡಿಸೆಂಬರ್ 2023, 12:56 IST
Last Updated 30 ಡಿಸೆಂಬರ್ 2023, 12:56 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ವೀಸಾ ಸಂಬಂಧಿತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ ಇಬ್ಬರು ವ್ಯಕ್ತಿಗಳನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಮ್‌ಭಾಯ್‌ ಪಟೇಲ್‌ (36) ಮತ್ತು ಬಲ್ವಿಂದರ್‌ ಸಿಂಗ್ (39) ಎಂಬವರನ್ನು ಡಿಸೆಂಬರ್ 13ರಂದು ಬಂಧಿಸಲಾಗಿದೆ ಎಂದು ಅಮೆರಿಕದ ಅಟಾರ್ನಿ ಕಚೇರಿಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಆರೋಪ ಸಾಬೀತಾದಲ್ಲಿ ಇವರಿಗೆ ಗರಿಷ್ಠ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 2.50 ಲಕ್ಷ ಡಾಲರ್‌ ದಂಡ ವಿಧಿಸಬಹುದಾಗಿದೆ.

‘ಅಮೆರಿಕದಲ್ಲಿ ಕೆಲವು ಪ್ರಕರಣಗಳ ಸಂತ್ರಸ್ತರಿಗೆ ಮಾತ್ರ ‘ಯು ವೀಸಾ’ ನೀಡಲಾಗುತ್ತದೆ. ಕೆಲ ಅಂಗಡಿಗಳ ಮಾಲೀಕರು ಈ ವೀಸಾವನ್ನು ಪಡೆಯುವ ಉದ್ದೇಶದಿಂದ ತಾವು, ‘ಸಂತ್ರಸ್ತರು’ ಎಂದು ಬಿಂಬಿಸಿಕೊಳ್ಳಲು ಬಂಧಿತರಿಂದ ದರೋಡೆ ಮಾಡಿಸುತ್ತಿದ್ದರು. ಪಟೇಲ್ ಮತ್ತು ಸಿಂಗ್‌ ಕನಿಷ್ಠ ಎಂಟು ಮದ್ಯದಂಗಡಿಗಳಲ್ಲಿ ಮತ್ತು ಫಾಸ್ಟ್ ಫುಡ್ ರೆಸ್ಟೊರೆಂಟ್‌ಗಳಲ್ಲಿ ದರೋಡೆಕಾರರಂತೆ ಕಾಣಿಸಿಕೊಂಡಿದ್ದರು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT