ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಇಬ್ಬರು ತೆಲುಗು ಭಾಷಿಕ ವಿದ್ಯಾರ್ಥಿಗಳ ಸಾವು

Published 15 ಜನವರಿ 2024, 21:14 IST
Last Updated 15 ಜನವರಿ 2024, 21:14 IST
ಅಕ್ಷರ ಗಾತ್ರ

ಹೈದರಾಬಾದ್‌: ಅಮೆರಿಕದ ಕನೆಕ್ಟಿಕಟ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ತೆಲುಗು ಭಾಷಿಕ ವಿದ್ಯಾರ್ಥಿಗಳು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟಿದ್ದು, ಇವರ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಶವಗಳನ್ನು ಭಾರತಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. 

ತೆಲಂಗಾಣದ ವನಪರ್ತಿಯ ಗಟ್ಟು ದಿನೇಶ್‌ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ನಿಕೇಶ್‌ (21) ಮೃತಪಟ್ಟ ವಿದ್ಯಾರ್ಥಿಗಳು. ಕನೆಕ್ಟಿಕಟ್ ರಾಜ್ಯದ ಹಾರ್ಟ್‌ಫೋರ್ಡ್ ಪಟ್ಟಣದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಇವರು ಭಾನುವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದರು.

ಈ ಇಬ್ಬರೂ ಕಂಪ್ಯೂಟರ್ ಸೈನ್ಸ್‌ನಲ್ಲಿ  ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ಹಾರ್ಟ್‌ಫೋರ್ಡ್‌ನ ಸೇಕ್ರೆಡ್ ಹಾರ್ಟ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು, ಕಳೆದ ಡಿಸೆಂಬರ್ 28ರಂದು ಅಮೆರಿಕಕ್ಕೆ ಹೋಗಿದ್ದರು.v

ವನಪರ್ತಿಯಲ್ಲಿರುವ ದಿನೇಶ್ ಅವರ ಕುಟುಂಬ ಸದಸ್ಯರು, ‘ಭಾನುವಾರ ಬೆಳಿಗ್ಗೆ ಇಬ್ಬರೂ ವಿದ್ಯಾರ್ಥಿಗಳು ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಕನೆಕ್ಟಿಕಟ್ ಪೊಲೀಸರಿಂದ ಬಂದಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕೊಠಡಿಯ ಶೂನ್ಯ ಉಷ್ಣಾಂಶದಲ್ಲಿ ಹೆಚ್ಚಿಗೆ ಹೀಟರ್‌ ಬಳಸಿ, ಹೀಟರ್‌ನಿಂದ ಹೊರಸೂಸಲ್ಪಟ್ಟ ಇಂಗಾಲದ ಮಾನಾಕ್ಸೈಡ್  ಉಸಿರಾಡಿ, ನಿದ್ರೆಯಲ್ಲಿಯೇ ಸಾವನ್ನಪ್ಪಿರಬಹುದೆಂದು ಪೊಲೀಸರು  ಶಂಕಿಸಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT