ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ನಲ್ಲೂ ಬ್ರೆಕ್ಸಿಟ್‌ ಒಪ್ಪಂದ ತಿರಸ್ಕೃತ

Last Updated 14 ಮಾರ್ಚ್ 2019, 20:04 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಸಂಸತ್‌ನಲ್ಲಿಯೂ ಬ್ರೆಕ್ಸಿಟ್ ಒಪ್ಪಂದ ತಿರಸ್ಕೃತಗೊಂಡಿದ್ದು, ಯುರೋಪಿಯನ್ ಒಕ್ಕೂಟದಿಂದ ಹೊರಬರುವ ಪ್ರಧಾನಿ ಥೆರೇಸಾ ಮೇ ಅವರ ನಿರ್ಧಾರ ಕಠಿಣವಾಗಿದೆ.

ಹೌಸ್‌ ಆಫ್‌ ಕಾಮೆನ್ಸ್‌ನ 312 ಸದಸ್ಯರಲ್ಲಿ ಒಪ್ಪಂದದ ವಿರುದ್ಧ 308 ಮಂದಿ ಮತ ಚಲಾಯಿಸಿದ್ದರು.

ಮಾರ್ಚ್‌ 29ರೊಳಗೆ ಯುರೋಪಿಯನ್‌ ಒಕ್ಕೂಟದಿಂದ ಬ್ರಿಟನ್‌ ಹೊರಬರುವ ಅವಧಿ ವಿಸ್ತರಣೆಗೆ ಆಗ್ರಹ ಕೇಳಿಬಂದಿದ್ದು, ಒಪ್ಪಂದದಿಂದಾಗಿ ಆಗುವ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗಗಳ ಕುರಿತು ಕಾನೂನು ಸಲಹೆ ಪಡೆಯಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ.

ಅವಧಿ ವಿಸ್ತರಣೆ ಮಾಡುವ ಕುರಿತು ಯುರೋಪಿಯನ್ ಒಕ್ಕೂಟ ನಿರ್ಧರಿಸಬೇಕಾಗುತ್ತದೆ ಹಾಗೂ ಎರಡೂ ಕಡೆಗಳಿಂದಲೂ ಚರ್ಚೆ ನಡೆಯಬೇಕಿದೆ.

ಈ ನಡುವೆ ಯುರೋಪಿಯನ್ ಒಕ್ಕೂಟವು ಚುನಾವಣೆಗೆ ಸಿದ್ಧತೆ ನಡೆಸುವ ಮೂಲಕ ಮೇ ಅಧಿಕಾರ ಅಂತ್ಯಗೊಳಿಸಲು ಸಿದ್ಧತೆ ನಡೆಸಿದ್ದರಿಂದ ಈ ಹಂತದಲ್ಲಿ ವಿಸ್ತರಣೆ ಮಾಡುವ ಸ್ಥಿತಿ ಇಲ್ಲ ಎಂದೂ ಹೇಳಲಾಗುತ್ತಿದೆ.

ಈಗಾಗಲೇ ಎರಡು ವರ್ಷಗಳ ಕಾಲ ಬ್ರಿಟನ್‌ ದೀರ್ಘಕಾಲ ಮಾತುಕತೆ ನಡೆಸುತ್ತಿದ್ದರಿಂದ ಒಪ್ಪಂದವನ್ನು ಮತ್ತೆ ಒಪ್ಪಿಕೊಳ್ಳುವುದಿಲ್ಲ ಎಂದು ಬ್ರಸೆಲ್ಸ್ ಸ್ಪಷ್ಟಪಡಿಸಿದೆ.

‘ಇಂದು ನಾವು ಬ್ರಿಟಿಷ್ ರಾಜಕೀಯ ವ್ಯವಸ್ಥೆಯ ಕೈಯಲ್ಲಿದ್ದೇವೆ. ಈಗ ಎಲ್ಲಿಂದ ಹೋಗಬೇಕೆಂದು ಅವರು ನಮಗೆ ತಿಳಿಸಬೇಕು. ಪರಿಹಾರವು ಲಂಡನ್‌ನಿಂದ ಬರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT