ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಮದ್ರಾಸ್‌ ಝಂಜಿಬರ್‌, ಬರ್ಮಿಂಗ್‌ಹ್ಯಾಂ ವಿ.ವಿ ಒಪ್ಪಂದ

Published 3 ಆಗಸ್ಟ್ 2023, 15:53 IST
Last Updated 3 ಆಗಸ್ಟ್ 2023, 15:53 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ): ಬ್ರಿಟನ್‌ನ ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯವು, ತಾಂಜಾನಿಯಾದ ದ್ವೀಪ ನಗರದಲ್ಲಿರುವ ಐಐಟಿ ಮದ್ರಾಸ್‌ನ ಝಂಜಿಬರ್‌ ಕ್ಯಾಂಪಸ್‌ ಜೊತೆಗೆ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಒಪ್ಪಂದ ಮಾಡಿಕೊಂಡಿದೆ.

ಐಐಟಿ ಮದ್ರಾಸ್‌ ಜಂಜಿಬಿರ್ ಕ್ಯಾಂಪಸ್‌ ಭಾರತದ ಹೊರಗಿನ ಮೊದಲ ಐಐಟಿ ಆಗಿದೆ. ಇದು, ಝಂಜಿಬರ್ ಮೂಲದ ಪದವಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಅಂದರೆ ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಕಲಿಯುವ ಅವಕಾಶ ಕಲ್ಪಿಸಲಿದೆ.

ಒಪ್ಪಂದದ ಭಾಗವಾಗಿ ಐಐಟಿ ಮದ್ರಾಸ್‌ ಝಂಜಿಬರ್ ಕ್ಯಾಂಪಸ್‌ನ ವಿದ್ಯಾರ್ಥಿಗಳನ್ನು ನಮ್ಮ ವಿಶ್ವವಿದ್ಯಾಲಯಕ್ಕೆ ಸ್ವಾಗತಿಸಲು ನಮಗೆ ಸಂತಸವಾಗಲಿದೆ ಎಂದು ಕುಲಾಧಿಪತಿ ಪ್ರೊ.ರಾಬಿನ್‌ ಮ್ಯಾಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT