ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆರ್ನೋಬಿಲ್‌ | ವಾತಾವರಣಕ್ಕೆ ಹೆಚ್ಚಿನ ಅಣು ವಿಕಿರಣ: ಆತಂಕ

ರಷ್ಯಾ ಹಿಡಿತದಲ್ಲಿ ಚೆರ್ನೋಬಿಲ್‌ ಅಣು ವಿದ್ಯುತ್ ಸ್ಥಾವರ
Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಕೀವ್, ಉಕ್ರೇನ್‌:‘ಚೆರ್ನೋಬಿಲ್‌ ಅಣು ವಿದ್ಯುತ್ ಸ್ಥಾವರ’ದ ಮೇಲೆ ರಷ್ಯಾದ ಸೇನೆ ಹಿಡಿತ ಸಾಧಿಸಿದ ಬೆನ್ನಲ್ಲೇ, ಆ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಣುವಿಕಿರಣಗಳು ವಾತಾವರಣವನ್ನು ಸೇರುತ್ತಿರುವ ಆತಂಕ ಎದುರಾಗಿದೆ.

‘ಸ್ಥಾವರವಿರುವ ಪ್ರದೇಶದ ವಾತಾವರಣದಲ್ಲಿ ಅಣು ವಿಕಿರಣದ ಸಾಂದ್ರತೆಯು ತೀವ್ರಗತಿಯಲ್ಲಿ ಏರಿಕೆ ಆಗಿರುವುದು ದಾಖಲಾಗಿದೆ’ ಎಂದು ಉಕ್ರೇನ್‌ನ ಅಣುಶಕ್ತಿ ಏಜೆನ್ಸಿ ಮತ್ತು ಗೃಹ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಆದರೆ, ಈ ವಾತಾವರಣದಲ್ಲಿ ಹೆಚ್ಚಾಗಿರುವ ಅಣುವಿಕಿರಣದ ಸಾಂದ್ರತೆ ಕುರಿತು ಏಜೆನ್ಸಿಯು ಸ್ಪಷ್ಟ ಮಾಹಿತಿ ಒದಗಿಸಿಲ್ಲ. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇನೆಯ ವಾಹನಗಳು ಚಲಿಸಿದr ಕಾರಣ ಅಣುವಿಕಿರಣ ಒಳಗೊಂಡಿದ್ದ ದೂಳು ಹೆಚ್ಚಾಗಿ ವಾತಾವರಣ ಸೇರಿದೆ ಎಂದು ತಿಳಿಸಿದೆ.

‘ಗಾಳಿಯಲ್ಲಿ ವಿಕಿರಣದ ಪ್ರಮಾಣವು ಹೆಚ್ಚಾಗುತ್ತಿದೆ. ಆದರೆ, ಕೀವ್‌ ನಗರದ ದೃಷ್ಟಿಯಿಂದಸದ್ಯದ ಸ್ಥಿತಿಯಲ್ಲಿ ಇದು ಆತಂಕ ಪಡುವಂತಹದ್ದಲ್ಲ. ಆದರೂ ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ’ ಎಂದೂ ಸಚಿವಾಲಯವು ವಿವರಿಸಿದೆ.

ಕೀವ್‌ ನಗರದ ದಕ್ಷಿಣಕ್ಕೆ 130 ಕಿ.ಮೀ ದೂರದಲ್ಲಿರುವ ಸ್ಥಾವರ ಸದ್ಯ ನಿಷ್ಕ್ರಿಯವಾಗಿದೆ. ಏಪ್ರಿಲ್‌ 1986ರಲ್ಲಿ ಇಲ್ಲಿ ಸ್ಫೋಟ ಸಂಭವಿಸಿತ್ತು. ಸ್ಥಾವರದಲ್ಲಿ ಈಗಲೂ ಅಣುವಿಕಿರಣಗಳು ಸಕ್ರಿಯವಾಗಿವೆ ಎಂದು ಹೇಳಲಾಗಿದೆ.

ಇನ್ನೊಂದೆಡೆ, ಉಕ್ರೇನ್‌ನ ನೆರೆದೇಶವಾದ ಪೋಲೆಂಡ್‌, ತನ್ನ ವ್ಯಾಪ್ತಿಯಲ್ಲಿ ವಾತಾವರಣದಲ್ಲಿ ಅಣು ವಿಕಿರಣದ ಪ್ರಮಾಣ ಏರಿಕೆಯಾಗಿರುವುದು ದಾಖಲಾಗಿಲ್ಲ ಎಂದು ತಿಳಿಸಿದೆ.

ಮಾಸ್ಕೊ ವರದಿ: ಈ ಮಧ್ಯೆ, ಅಣುಶಕ್ತಿ ವಿದ್ಯುತ್‌ ಸ್ಥಾವರದ ರಕ್ಷಣೆ ಕಾರ್ಯಕ್ಕಾಗಿ ನೆರವಾಗಲು ಪ್ಯಾರಾಟ್ರೂಪ್ ಸಿಬ್ಬಂದಿ ಕಳುಹಿಸಲಾಗುವುದು. ಅಲ್ಲಿನ ವಾತಾವರಣದಲ್ಲಿ ಅಣುವಿಕಿರಣದ ಪ್ರಮಾಣ ಸದ್ಯ ಸಹಜ ಸ್ಥಿತಿಯಲ್ಲಿದೆ ಎಂದೂ ರಷ್ಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT