ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂಬಾಬ್ವೆ ತೀವ್ರ ಬರಪೀಡಿತ ನೆರವಿಗೆ ವಿಶ್ವಸಂಸ್ಥೆ ಮನವಿ

Published 10 ಮೇ 2024, 15:29 IST
Last Updated 10 ಮೇ 2024, 15:29 IST
ಅಕ್ಷರ ಗಾತ್ರ

ಹರಾರೆ: ತೀವ್ರ ಬರ ಪರಿಸ್ಥಿತಿಯಿಂದಾಗಿ ಜಿಂಬಾಬ್ವೆಯ ಶೇ 50ರಷ್ಟು ಜನಸಂಖ್ಯೆಯು ಆಹಾರ ಮತ್ತು ನೀರಿನ ತೀವ್ರ ಕೊರತೆಯಿಂದ ಬಳಲುತ್ತಿದೆ, 430 ಮಿಲಿಯನ್‌ ಡಾಲರ್ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಕಳೆದ 4 ದಶಕಗಳ ಅವಧಿಯಲ್ಲೇ ಗಂಭೀರವಾದ ಪರಿಸ್ಥಿತಿಯನ್ನು ಜಿಂಬಾಬ್ವೆ ಎದುರಿಸುತ್ತಿದೆ. 76 ಲಕ್ಷ ಜನರಿಗೆ ಜೀವರಕ್ಷಕ ಮಾನವೀಯ ನೆರವು ಅಗತ್ಯವಿದೆ. ಇವರಲ್ಲಿ ಸುಮಾರು 31 ಲಕ್ಷ ಜನರು ತೀವ್ರ ಬಾಧಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಮಾನವೀಯ ನೆರವು ವ್ಯವಹಾರಗಳ ವಿಭಾಗದ ಎಡ್ವರ್ಡ್ ಮ್ಯಾಥ್ಯೂ ಕಲ್ಲೊನ್ ಹೇಳಿದ್ದಾರೆ.

ಜಿಂಬಾಬ್ವೆಯ ಶೇ 60ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸವಿದ್ದಾರೆ. ಹೆಚ್ಚಿನವರು ಮಾರುಕಟ್ಟೆಯಲ್ಲಿ ಆಹಾರ ಖರೀದಿಸಲೂ ಅಶಕ್ತರಾಗಿದ್ದಾರೆ. ಬರುವ ತಿಂಗಳುಗಳಲ್ಲಿ ಜೀವಹಾನಿ ತಪ್ಪಿಸಲು ತಕ್ಷಣದ ಕ್ರಮ ಅಗತ್ಯವಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT