ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಎಲ್‌ ನಿನೊ ಸಾಧ್ಯತೆ ಶೇ 70ರಷ್ಟು: ವಿಶ್ವಸಂಸ್ಥೆ

Last Updated 10 ಸೆಪ್ಟೆಂಬರ್ 2018, 14:10 IST
ಅಕ್ಷರ ಗಾತ್ರ

ಜಿನೇವಾ: ಜಾಗತಿಕ ತಾಪಮಾನದ ಮೇಲೆ ಪ್ರಭಾವ ಬೀರುವ ಎಲ್‌–ನಿನೊ ವಿದ್ಯಮಾನ ಉಂಟಾಗುವ ಸಾಧ್ಯತೆ ಈ ಬಾರಿ ಶೇ 70ರಷ್ಟಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ವರ್ಷಾಂತ್ಯದ ವೇಳೆಗೆ ಎಲ್‌–ನಿನೊ ವಿದ್ಯಮಾನ ಜರುಗುವ ಸಾಧ್ಯತೆಯಿದೆ.

ಜಾಗತಿಕ ಹವಾಮಾನ ಮುನ್ಸೂಚನಾ ಸಂಸ್ಥೆ‌ ಪ್ರಕಾರ, ಪೆಸಿಫಿಕ್‌ ಸಾಗರದ ಪೂರ್ವಭಾಗದಲ್ಲಿ ನಿಯಮಿತವಾಗಿ ಉಷ್ಣಾಂಶ ಹೆಚ್ಚಾಗಿದ್ದು, ಇದು ಎಲ್‌–ನಿನೊ ಉಂಟಾಗುವಿಕೆಗೆ ಕಾರಣವಾಗಿದೆ. ಇದರ ಪ್ರಭಾವದಿಂದ ಕೆಲವು ಪ್ರದೇಶದಲ್ಲಿ ಬರಪರಿಸ್ಥಿತಿ ತಲೆದೋರಿದರೆ, ಇನ್ನು ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

2015–2016ರಲ್ಲಿ ಇದ್ದಷ್ಟು ಪ್ರಭಾವವನ್ನುಎಲ್‌–ನಿನೊ ಈ ಬಾರಿ ಹೊಂದಿಲ್ಲ. ಆದರೂ, ಗಮನಾರ್ಹ ಪರಿಣಾಮ ಬೀರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಏಷ್ಯಾ–ಪೆಸಿಫಿಕ್‌ ಭಾಗ, ಯುರೋಪ್‌, ಉತ್ತರ‍ ಅಮೆರಿಕ, ಆಫ್ರಿಕಾ ಹಾಗೂ ದಕ್ಷಿಣ ಅಮೆರಿಕದ ಕರಾವಳಿ ಭಾಗದ ಮೇಲ್ಮೈನಲ್ಲಿ ತಾಪಮಾನ ಏರಿಕೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT