ನ್ಯೂಯಾರ್ಕ್: ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿಯ ವಿಚಾರವಾಗಿ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟಗಳು ಅಗತ್ಯ ಸಹಕಾರ ನೀಡಬೇಕೆಂದುವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಕೋರಿದ್ದಾರೆ.

ತಜಕಿಸ್ತಾನದಲ್ಲಿ ನಡೆಯುತ್ತಿರುವ ಎಸ್‌ಸಿಒ ಶೃಂಗಸಭೆಯನ್ನುದ್ದೇಶಿಸಿ ಶುಕ್ರವಾರ ಮಾತನಾಡಿರುವಗುಟೆರಸ್, ಅಫ್ಗಾನಿಸ್ತಾನದಲ್ಲಿನ ಆತಂಕಕಾರಿ ಬೆಳವಣಿಗೆಗಳು ರಾಜಕೀಯ, ಆರ್ಥಿಕ, ಭದ್ರತೆ ಮತ್ತು ಮಾನವೀಯ ಸವಾಲುಗಳನ್ನು ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ.

ʼಅಫ್ಗಾನಿಸ್ತಾನದ ಜನರಿಗೆ ನೆರವಾಗಲು ವಿಶ್ವಸಂಸ್ಥೆಯು ಬದ್ದವಾಗಿದೆʼ ಎಂದಿರುವ ಅವರು, ʼಅಫ್ಗನ್ನರಿಗೆ ಬೆಂಬಲ ನೀಡಲು ನಿಮ್ಮೆಲ್ಲರೊಂದಿಗೆ ಸೇರಿಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆʼ ಎಂದು ತಿಳಿಸಿದ್ದಾರೆ.

ಮುಂದುವರಿದು, ʼಅಫ್ಗಾನಿಸ್ತಾನದಲ್ಲಿನ ಆತಂಕಕಾರಿಪರಿಸ್ಥಿತಿಯು ವೇಗವಾಗಿ ಬೆಳೆಯುತ್ತಿದ್ದು, ಅನಿಶ್ಚಿತತೆಯ ವಾತಾವರಣ ನಿರ್ಮಾಣವಾಗಿದೆ. ಆದರೆ, ಅಲ್ಲಿನ ಜನರು ತೀವ್ರ ಬಡತನವನ್ನು ತೊಡೆದುಹಾಕಲು, ಉದ್ಯೋಗಗಳನ್ನು ಪಡೆದುಕೊಳ್ಳಲು, ಆರೋಗ್ಯ, ಶಿಕ್ಷಣ ಸೇವೆಗಳ ಪುನಃಸ್ಥಾಪನೆ ಹಾಗೂ ಅವರ ಬದುಕು, ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಲು ಬಯಸುತ್ತಿದ್ದಾರೆʼ ಎಂದು ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ತಜ್ಞರು ಮತ್ತು ವಿಶ್ವಸಂಸ್ಥೆಯ ವಿವಿಧ ಮಂಡಳಿಗಳು ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಆ ದೇಶಕ್ಕೆ ಅಗತ್ಯ ನೆರವು ನೀಡುವಂತೆಯೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿವೆ.

ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ ಪಿಲಿಪ್ಪೊ ಗ್ರಾಂಡಿ ಅವರು ಅಫ್ಗಾನಿಸ್ತಾನದಲ್ಲಿನ ಮಾನವೀಯ ಸನ್ನಿವೇಶವು ʼಅತ್ಯಂತ ಹತಾಶೆʼ ಮೂಡಿಸುತ್ತಿದೆ. ಆಹಾರ, ಔಷಧ, ವಸತಿ ಮತ್ತು ಇತರ ಅಗತ್ಯಗಳನ್ನು ತುರ್ತಾಗಿ ಪೂರೈಸಬೇಕಿದೆ ಎಂದು ಕರೆ ನೀಡಿದ್ದರು.

ಇವನ್ನೂ ಓದಿ
*ಕಾಬೂಲ್ ಡ್ರೋನ್ ದಾಳಿಯಲ್ಲಿ ನಾಗರಿಕರ ಹತ್ಯೆ; ತಪ್ಪೊಪ್ಪಿಕೊಂಡ ಅಮೆರಿಕ
*ಅಫ್ಗಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದಲ್ಲಿ ಸರಣಿ ಸ್ಫೋಟ, 3 ಸಾವು
*ಚೀನಾವನ್ನು ಎದುರಿಸಲು ಅಮೆರಿಕ ಹೊಸ ಮೈತ್ರಿಕೂಟ: ಯುರೋಪ್, ಫ್ರಾನ್ಸ್ ಆಕ್ರೋಶ
*ಅಫ್ಗನ್ನಲ್ಲಿ ಭಾರತೀಯನ ಅಪಹರಣ; ತಾಲಿಬಾನ್ ಸಂಪರ್ಕದಲ್ಲಿ ಭಾರತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.