ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ನಿಂದ 34 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರ ಹತ್ಯೆ: ಗಾಜಾ

Published 30 ಏಪ್ರಿಲ್ 2024, 12:42 IST
Last Updated 30 ಏಪ್ರಿಲ್ 2024, 12:42 IST
ಅಕ್ಷರ ಗಾತ್ರ

ಕೈರೊ: ‘ಕಳೆದ ವರ್ಷದ ಅಕ್ಟೋಬರ್‌ನಿಂದ ಇಲ್ಲಿಯವರೆಗೆ‌ ಇಸ್ರೇಲ್‌ ಸೇನೆಯಿಂದ ಗಾಜಾ ಪಟ್ಟಿಯಲ್ಲಿ ಮೃತಪಟ್ಟ ಪ್ಯಾಲೆಸ್ಟೀನಿಯನ್ನರ ಸಂಖ್ಯೆ 34,535ಕ್ಕೂ ಹೆಚ್ಚಾಗಿದೆ. 77,704 ಮಂದಿ ಗಾಯಗೊಂಡಿದ್ದಾರೆ’ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.

‘ಕಳೆದ 24 ಗಂಟೆಯಲ್ಲಿ ಇಸ್ರೇಲ್‌ ಸೇನೆ ನಡೆಸಿದ ದಾಳಿಯಿಂದಾಗಿ 47 ಮಂದಿ ಸಾವಿಗೀಡಾಗಿದ್ದಾರೆ‌ ಮತ್ತು 61 ಮಂದಿ ಗಾಯಗೊಂಡಿದ್ದಾರೆ’ ಎಂದೂ ಅದು ತಿಳಿಸಿದೆ.

‘ಸುಮಾರು 10 ಸಾವಿರ ಪ್ಯಾಲೆಸ್ಟೀನಿಯರ ಮೃತ ದೇಹಗಳು ದಾಳಿಗೊಳಗಾದ ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು’ ಎಂದು ಗಾಜಾದ ನಾಗರಿಕ ತುರ್ತು ಸೇವಾ ಸಂಸ್ಥೆ ಅಂ‌ದಾಜಿಸಿದ್ದು, ‘ಆಸ್ಪತ್ರೆಯ ದಾಖ‌ಲಾತಿಗಳಲ್ಲಿ ದೊರೆತ ಸಾವಿನ ಸಂಖ್ಯೆಯನ್ನು ಮಾತ್ರ ಗಾಜಾ ಆರೋಗ್ಯ ಸಚಿವಾಲಯ ಪರಿಷ್ಕರಿಸಿ, ಮಾಹಿತಿ ನೀಡಿದೆ. ಇನ್ನೂ ಪತ್ತೆಯಾಗದ ಮೃತರ ಸಂಖ್ಯೆಯನ್ನು ಒಟ್ಟು ಸಾವಿನ ಸಂಖ್ಯೆಗೆ ಸೇರಿಸಿಲ್ಲ’ ಎಂದು ಹೇಳಿದೆ.‌

‘ಸಾಕಷ್ಟು ಉಪಕರಣಗಳು ಲಭ್ಯವಿಲ್ಲದ ಕಾರಣ ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು, ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಅವಶೇಷಗಳಡಿ ಸಿಲುಕಿರುವ ಮೃತದೇಹಗಳಿಂದ ರೋಗಗಳು ಹರಡಲು ಪ್ರಾರಂಭವಾಗಿದೆ’ ಎಂದೂ ಅದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT