ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಷ್‌ ಮನಿ’ ಪ್ರಕರಣ: ಟ್ರಂಪ್‌ಗೆ ₹6 ಲಕ್ಷ ದಂಡ

Published 30 ಏಪ್ರಿಲ್ 2024, 20:28 IST
Last Updated 30 ಏಪ್ರಿಲ್ 2024, 20:28 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ‘ಹಷ್‌ ಮನಿ’ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇಲ್ಲಿನ ನ್ಯಾಯಾಲಯ ₹ 6 ಲಕ್ಷ ದಂಡ ವಿಧಿಸಿದೆ.

ಟ್ರಂಪ್ ಅವರು ನಟಿ ಸ್ಟ್ರಾಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪಕ್ಕೆ ಸಂಬಂಧಿಸಿ ‘ಹಷ್ ಮನಿ’ ಪ್ರಕರಣದಡಿ ಕಾನೂನು ವಿಚಾರಣೆ ಎದುರಿಸುತ್ತಿದ್ದಾರೆ. ‘ಗೋಪ್ಯತೆ ರಕ್ಷಿಸಲು ನೀಡಿದ ಹಣ’ಕ್ಕೆ ‘ಹಷ್‌ ಮನಿ’ ಎನ್ನಲಾಗುತ್ತದೆ.

ಸ್ಟಾರ್ಮಿ ಜೊತೆಗೆ 2006ರಲ್ಲಿ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದರು. ಇದಕ್ಕೆ ಸಂಬಂಧಿಸಿ ಮೌನ ವಹಿಸುವ ಕುರಿತು ಸ್ಟಾರ್ಮಿ ಅವರಿಗೆ ಟ್ರಂಪ್‌ ತಮ್ಮ ವಕೀಲರ ಮೂಲಕ ಹಣ ಪಾವತಿಸಿದ್ದರು ಎಂಬ ಆರೋಪ ಇದ್ದು, ಇದರ ವಿಚಾರಣೆ ನಡೆಯುತ್ತಿದೆ. 

ಈ ಪ್ರಕರಣ 2016ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಮೇಲೆ ಪ್ರಭಾವ ಬೀರಬಹುದು ಎಂಬ ಕಾರಣಕ್ಕೆ ಟ್ರಂಪ್‌, ನಟಿಗೆ ಹಣ ನೀಡಿದ್ದರು ಎಂದು ಆರೋಪಿಸಲಾಗಿದೆ. ಟ್ರಂಪ್, ಆರಂಭದಲ್ಲಿ ಈ ಆರೋಪ ನಿರಾಕರಿಸಿದರೂ ನಂತರ ಇದೊಂದು ‘ಸರಳ ಖಾಸಗಿ ವಹಿವಾಟು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT