ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಎಟಿಎಫ್‌ ಜತೆಗೂಡಿ ಕ್ರಿಯಾ ಯೋಜನೆ ಪೂರ್ಣಗೊಳಿಸಲು ಪಾಕ್‌ಗೆ ಅಮೆರಿಕ ಒತ್ತಾಯ

Last Updated 20 ಜುಲೈ 2021, 10:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಉಗ್ರರಿಗೆ ಸಿಗುತ್ತಿರುವ ಹಣಕಾಸು ನೆರವಿನ ಬಗ್ಗೆ ತನಿಖೆ ಮತ್ತು ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕ ಗುಂಪುಗಳ ನಾಯಕರು ಮತ್ತು ಕಮಾಂಡರ್‌ಗಳ ವಿರುದ್ಧ ಕ್ರಮಕೈಗೊಳ್ಳುವ ಮೂಲಕ ಎಫ್‌ಎಟಿಎಫ್‌ನ ಕ್ರಿಯಾ ಯೋಜನೆಗಳ27 ಅಂಶಗಳನ್ನು ಪೂರ್ಣಗೊಳಿಸಬೇಕು’ ಎಂದು ಪಾಕಿಸ್ತಾನವನ್ನು ಅಮೆರಿಕ ಒತ್ತಾಯಿಸಿದೆ.

ಉಗ್ರರಿಗೆ ಹಣಕಾಸು ಪೂರೈಕೆ ಮತ್ತು ಹಣ ಅಕ್ರಮ ವರ್ಗಾವಣೆ ಕುರಿತಾಗಿ ತನಿಖೆ ನಡೆಸುವಲ್ಲಿ ಪಾಕಿಸ್ತಾನ ವಿಫಲವಾದ್ದರಿಂದಕಳೆದ ತಿಂಗಳು ನಡೆದ ವರ್ಚುವಲ್‌ ಸಭೆಯಲ್ಲಿ ಎಫ್‌ಎಟಿಎಫ್‌ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲೇ ಉಳಿಸಿಕೊಂಡಿತ್ತು.

ವಿಶ್ವಸಂಸ್ಥೆ ಗೊತ್ತುಪಡಿಸಿದ ಉಗ್ರರುಗಳಾದ ಜೈಷ್‌ ಎ–ಮೊಹಮ್ಮದ್‌(ಜೆಇಎಂ) ಮುಖ್ಯಸ್ಥ ಮಸೂದ್‌ ಅಜರ್‌, ಲಷ್ಕರ್‌ ಎ ತಯಬಾ (ಎಲ್‌ಇಟಿ) ಸ್ಥಾಪಕ ಹಫೀಜ್‌ ಸಯೀದ್‌ ಅವರಂತಹ ಪಾಕಿಸ್ತಾನಿ ಮೂಲದ ಉಗ್ರರ ಬಗ್ಗೆ ತನಿಖೆ ನಡೆಸುವಂತೆ ಎಫ್‌ಎಟಿಎಫ್‌ ಪಾಕಿಸ್ತಾನಕ್ಕೆ ಹೇಳಿತ್ತು. ಅಲ್ಲದೆ ತನ್ನ ಕಾರ್ಯತಂತ್ರಗಳಲ್ಲಿರುವ ಪ್ರಮುಖ ನ್ಯೂನತೆಗಳನ್ನು ಸರಿಪಡಿಸುವಂತೆ ಪಾಕಿಸ್ತಾನದಲ್ಲಿ ಕೇಳಿಕೊಂಡಿತ್ತು.

‘ಪಾಕಿಸ್ತಾನವು ಮೊದಲ ಕ್ರಿಯಾ ಯೋಜನೆಗಳನ್ನು ಅನುಸರಿಸುವಲ್ಲಿ ಪ್ರಗತಿ ಸಾಧಿಸಿದೆ. ಈಗ ಎರಡನೇ ಕ್ರಿಯಾ ಯೋಜನೆ ಮೇಲೂ ಪಾಕಿಸ್ತಾನ ಕಾರ್ಯನಿರ್ವಹಿಸಬೇಕು. ಬಾಕಿ ಉಳಿದಿರುವ ಕ್ರಿಯಾ ಯೋಜನೆಗಳನ್ನು ಎಫ್‌ಎಟಿಎಫ್‌ನೊಂದಿಗೆ ಸೇರಿ ಪೂರ್ಣಗೊಳಿಸುವಂತೆ ಪಾಕಿಸ್ತಾನವನ್ನು ನಾವು ಪ್ರೋತ್ಸಾಹಿಸುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT