ಕ್ಯಾರಕಾಸ್: ಹೊಸ ವರ್ಷದ ಆರಂಭದಲ್ಲೇ ವೆನೆಜುವೆಲಾ ರಾಜಧಾನಿ ಕ್ಯಾರಕಾಸ್ ಮೇಲೆ ಅಮೆರಿಕ ದಾಳಿ ನಡೆಸಿದ್ದು, ವಿಶ್ವದ ಎಲ್ಲಾ ದೇಶಗಳು ಕೂಡ ಆ ಪುಟ್ಟ ದೇಶದ ಕಡೆ ಕುತೂಹಲದಿಂದ ನೋಡುವಂತೆ ಮಾಡಿದೆ.

ವಿಶ್ವದ ದೊಡ್ಡಣ್ಣ ಎಂದೇ ತನ್ನನ್ನು ತಾನು ಕರೆದುಕೊಳ್ಳುವ ಅಮೆರಿಕವು ನಮ್ಮ ನಾಗರಿಕರ ಮೇಲೆ ಸೇನಾ ದಾಳಿ ನಡೆಸುತ್ತಿದೆ ಎಂದು ವೆನೆಜುವೆಲಾ ಆರೋಪ ಮಾಡುತ್ತಿದೆ. ದಾಳಿ ಹಿನ್ನಲೆಯಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಕೂಡ ಘೋಷಿಸಲಾಗಿದೆ.

2025ರ ಸೆಪ್ಟೆಂಬರ್ನಿಂದ ವೆನೆಜುವೆಲಾ ಮೇಲೆ ಅಮೆರಿಕವು 20ಕ್ಕೂ ಅಧಿಕ ಬಾರಿ ವಾಯುದಾಳಿ ನಡೆಸಿತ್ತು.
.ವೆನೆಜುವೆಲಾ ಮೇಲೆ ಅಮೆರಿಕ ಸರಣಿ ದಾಳಿ: ರಾಜಧಾನಿಯನ್ನಾವರಿಸಿದ ದಟ್ಟ ಹೊಗೆ.
ವೆನೆಜುವೆಲಾ ಮೇಲಿನ ದಾಳಿಗೆ ಪ್ರಮುಖ ಕಾರಣಗಳೇನು

ಮಾದಕವಸ್ತು ಕಳ್ಳಸಾಗಾಣಿಕೆ: ದಕ್ಷಿಣ ಅಮೆರಿಕ ಖಂಡದ ಉತ್ತರ ಸಮುದ್ರ ತೀರದಲ್ಲಿರುವ ವೆನೆಜುವೆಲಾವು ಬ್ರೆಜಿಲ್ನೊಂದಿಗೆ ಗಡಿ ಹಂಚಿಕೊಂಡಿದ್ದು, ಕೆರೆಬಿಯನ್ ದ್ವೀಪ ಸಮೂಹ ಹಾಗೂ ಮೆಕ್ಸಿಕೊ ದೇಶಗಳಿಗೆ ಹತ್ತಿರದಲ್ಲಿದೆ. ಹೇರಳವಾಗಿ ನೈಸರ್ಗಿಕ ಸಂಪನ್ಮೂಲ ಹೊಂದಿರುವ ವೆನೆಜುವೆಲಾ, 2000ದಿಂದ ಅರ್ಥಿಕ ಸಂಕಷ್ಟ ಅನುಭವಿಸುತ್ತಿದೆ.

ವೆನೆಜುವೆಲಾದಲ್ಲಿ ಅಪರಾಧ ಪ್ರಮಾಣ ಹೆಚ್ಚಾಗಿದೆ ಹಾಗೂ ನಿರುದ್ಯೋಗ ಉಂಟಾಗಿದೆ. ಮಾದಕ ಪದಾರ್ಥಗಳ ತಯಾರಿಕೆ ಹಾಗೂ ಮಾದಕವಸ್ತು ಕಳ್ಳಸಾಗಾಣಿಕೆಗೆ ಅಧ್ಯಕ್ಷ ನಿಕೋಲಸ್ ಮಡುರೊ ಸಹಕಾರ ನೀಡುತ್ತಿದ್ದಾರೆ ಎಂದು ಟ್ರಂಪ್ ಮೊದಲಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ವೆನೆಜುವೆಲಾ ಮೇಲೆ ದಾಳಿ ನಡೆಸುವುದಾಗಿ ಕೂಡ ಅವರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಮಡುರೊ ಅವರು ಟ್ರಂಪ್ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದರು. ಇತ್ತೀಚೆಗೆ ವೆನೆಜುವೆಲಾ ಮೇಲೆ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಆರ್ಥಿಕ ನಿರ್ಬಂಧ ಕೂಡ ವಿಧಿಸಿದ್ದವು. ಅದರ ಬೆನ್ನಲ್ಲೇ ಇಂದು (ಜ.3) ದಾಳಿ ನಡೆದಿದೆ.
.ವೈಮಾನಿಕ ದಾಳಿ ಬೆನ್ನಲ್ಲೇ ವೆನೆಜುವೆಲಾ ಅಧ್ಯಕ್ಷ ಮಡುರೊ, ಪತ್ನಿ ಸೆರೆ: ಟ್ರಂಪ್.
ನಿಕೋಲಸ್ ಮಡುರೊ ಅವರನ್ನು ಅಧ್ಯಕ್ಷಗಾದಿಯಿಂದ ಕೆಳಗಿಳಿಸುವ ತಂತ್ರ: 2013ರಿಂದ ವೆನುಜುವೆಲಾದ ಅಧ್ಯಕ್ಷರಾಗಿರುವ ನಿಕೋಲಸ್ ಮಡುರೊ ಅವರು ಟ್ರಂಪ್ ಹಾಗೂ ಅಮೆರಿಕದ ಕಟು ವಿರೋಧಿಯಾಗಿದ್ದಾರೆ. ಬಸ್ ಡ್ರೈವರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಮಡುರೊ, ನಂತರ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ನಂತರ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳನ್ನು ಮಡುರೊ ಕಟುವಾಗಿ ಟೀಕಿಸುತ್ತಾ ಬಂದಿದ್ದಾರೆ. ಮಡುರೊ ವಿರುದ್ಧ ಚುನಾವಣಾ ಅಕ್ರಮದ ಆರೋಪವನ್ನು ಹಲವು ಬಾರಿ ಅಮೆರಿಕ ಮಾಡಿತ್ತು. ಹಾಗಾಗಿ ವೆನೆಜುವೆಲಾ ಮೇಲಿನ ದಾಳಿಯನ್ನು ಮಡುರೊ ಅವರನ್ನು ಅಧ್ಯಕ್ಷಗಾದಿಯಿಂದ ಕೆಳಗಿಳಿಸುವ ತಂತ್ರ ಎಂದೂ ವಿಶ್ಲೇಷಿಸಲಾಗುತ್ತಿದೆ.

ಕ್ಯಾರಕಾಸ್ ಮೇಲಿನ ವಾಯುದಾಳಿಯ ನಂತರ, ಅಧ್ಯಕ್ಷ ಮಡುರೊ ಅವರು ಮಾದಕವಸ್ತು ಕಳ್ಳಸಾಗಣಿಕೆಗೆ ಸಹಾಯ ಮಾಡುತ್ತಿದ್ದರು ಎಂದು ಆರೋಪಿಸಿ ಅವರು ಹಾಗೂ ಅವರ ಪತ್ನಿಯನ್ನುಅಮೆರಿಕ ಸೇನೆಯು ಸೆರೆ ಹಿಡಿದಿದೆ. ಈ ಘಟನೆಯು ಅಮೆರಿಕದ ದಾಳಿಯು ಮಡುರೊ ಅವರನ್ನು ಅಧ್ಯಕ್ಷಗಾದಿಯಿಂದ ಕೆಳಗಿಳಿಸುವ ತಂತ್ರ ಎನ್ನುವ ವಾದಕ್ಕೆ ಪುಷ್ಟಿ ನೀಡುತ್ತಿದೆ.
.ವೆನೆಜುವೆಲಾ ಅಧ್ಯಕ್ಷರನ್ನು ಹೊಗಳಿದ ಡೀಗೊ ಮರಡೋನಾಗೆ ನೋಟಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.