ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನೆಜುವೆಲಾ ಅಧ್ಯಕ್ಷರನ್ನು ಹೊಗಳಿದ ಡೀಗೊ ಮರಡೋನಾಗೆ ನೋಟಿಸ್‌

Last Updated 4 ಏಪ್ರಿಲ್ 2019, 19:58 IST
ಅಕ್ಷರ ಗಾತ್ರ

ಸಿಕೊ: ಪಂದ್ಯವೊಂದರ ನಂತರ ವೆನೆಜುವೆಲಾ ಅಧ್ಯಕ್ಷರನ್ನು ಹೊಗಳಿದ ಡೀಗೊ ಮರಡೋನಾಗೆ ಮೆಕ್ಸಿಕೊ ಫುಟ್‌ಬಾಲ್‌ ಫೆಡರೇಷನ್ ನೋಟಿಸ್ ಜಾರಿ ಮಾಡಿದೆ. ಫೆಡರೇಷನ್‌ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.

ಎರಡನೇ ಡಿವಿಷನಲ್‌ ಪಂದ್ಯದಲ್ಲಿ ಆಡುವ ಮೆಕ್ಸಿಕೊ ತಂಡದ ಕೋಚ್ ಆಗಿರುವ ಮರಡೋನ ಇತ್ತೀಚೆಗೆ ನಡೆದ ಪಂದ್ಯವೊಂದರ ನಂತರ ಅಧ್ಯಕ್ಷ ನಿಕೋಲಸ್‌ ಮದುರೊ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅವರು ತರಬೇತಿ ನೀಡಿದ ಡೊರೊಡೋಸ್ ತಂಡ ತಾಂಪಿಕೊ ಎದುರಿನ ಪಂದ್ಯದಲ್ಲಿ 3–2ರಿಂದ ಗೆದ್ದಿತ್ತು. ಗೆಲುವನ್ನು ನಿಕೋಲಸ್ ಅವರಿಗೆ ಸಮರ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT