ವಾಷಿಂಗ್ಟನ್ (ಪಿಟಿಐ): ಹಿಂದೂಫೋಬಿಯಾವನ್ನು ಖಂಡಿಸುವ ನಿರ್ಣಯವನ್ನು ಜಾರ್ಜಿಯಾದ ಶಾಸನಸಭೆ ಅಂಗೀಕರಿಸಿದೆ. ಶಾಸನಸಭೆಯಲ್ಲಿ ಇಂಥ ನಿರ್ಣಯ ಅಂಗೀಕರಿಸಿದ ಅಮೆರಿಕದ ಮೊದಲ ರಾಜ್ಯವಾಗಿದೆ.
ಹಿಂದೂಫೋಬಿಯಾ ಮತ್ತು ಹಿಂದೂ ವಿರೋಧಿ ಧರ್ಮಾಂಧತೆಯನ್ನು ನಿರ್ಣಯದಲ್ಲಿ ಖಂಡಿಸಲಾಗಿದೆ. ಹಿಂದುತ್ವವು ವಿಶ್ವದ ಅತಿದೊಡ್ಡ ಮತ್ತು ಹಳೆಯದಾದ ಧರ್ಮವಾಗಿದೆ. ವಿಶ್ವದ 100ಕ್ಕೂ ಹೆಚ್ಚು ದೇಶಗಳಲ್ಲಿ ಈ ಧರ್ಮವನ್ನು ಪಾಲಿಸುವವರಿದ್ದಾರೆ. ವೈವಿಧ್ಯ ಸಂಪ್ರದಾಯ, ನಂಬಿಕೆಯನ್ನು ಈ ಧರ್ಮ ಪ್ರೋತ್ಸಾಹಿಸಲಿದೆ ಎಂದು ತಿಳಿಸಿದೆ.
ನಿರ್ಣಯವನ್ನು ಫೋರ್ಸಿತ್ ಪ್ರದೇಶವನ್ನು ಪ್ರತಿನಿಧಿಸುವ ಲಾರೆನ್ ಮೆಕ್‌ಡೊನಾಲ್ಡ್ ಮ್ತು ಟಾಡ್ ಜೋನ್ಸ್ ಮಂಡಿಸಿದರು. ಜಾರ್ಜಿಯಾದ ಈ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಹಿಂದೂ ಸಮುದಾಯದವರಿದ್ದಾರೆ.
ವೈದ್ಯಕೀಯ, ವಿಜ್ಞಾನ, ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಆತಿಥ್ಯ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಸಮುದಾಯದವರ ಕೊಡುಗೆ ದೊಡ್ಡದು. ಯೋಗ, ಆಯುರ್ವೇದ, ಆಹಾರ, ಕಲಾ ಕ್ಷೇತ್ರಗಳಲ್ಲಿ ಸಮುದಾಯದ ಕೊಡುಗೆಯನ್ನು ಅಮೆರಿಕದ ಸಮಾಜವು ಅಳವಡಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.