ವಾಷಿಂಗ್ಟನ್: ಚೀನಾ ಆಮದುಗಳ ಮೇಲೆ ಶೇ 50 ರಷ್ಟು ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರಕ್ಕೆ ಡೊನಾಲ್ಡ್ ಟ್ರಂಪ್ ಬಂದಿದ್ದು, ಈ ಮೂಲಕ ಚೀನಾ ಮೇಲಿನ ಅಮೆರಿಕದ ಸುಂಕವು ಶೇ 104ಕ್ಕೆ ಹೆಚ್ಚಳವಾಗಲಿದೆ ಶ್ವೇತಭವನ ಘೋಷಿಸಿದೆ.

ಅಮೆರಿಕದ ಸರಕುಗಳ ಮೇಲೆ ವಿಧಿಸಿರುವ ಶೇ 34ರಷ್ಟು ಪ್ರತೀಕಾರದ ಸುಂಕವನ್ನು ಹಿಂಪಡೆಯಲು ಚೀನಾಕ್ಕೆ ಟ್ರಂಪ್ 24 ಗಂಟೆಗಳ ಕಾಲಾವಕಾಶ ನೀಡಿದ್ದರು. ಇಲ್ಲದಿದ್ದರೆ ಚೀನಾದ ಸರಕುಗಳಿಗೆ ಒಟ್ಟಾರೆ ಶೇ 104ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಅಮೆರಿಕದ ಡೆಡ್ಲೈನ್ ಮುಗಿದರೂ ಚೀನಾ ಸೊಪ್ಪು ಹಾಕದಿರುವ ಕಾರಣ ಹೆಚ್ಚುವರಿ ಸುಂಕ ವಿಧಿಸಲು ಟ್ರಂಪ್ ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.

ಅಮೆರಿಕ ಕಾಲಮಾನ ಬುಧವಾರ ಮಧ್ಯರಾತ್ರಿ 12.01ರ ಸುಮಾರಿಗೆ ಈ ಪರಿಷ್ಕೃತ ಸುಂಕ ಜಾರಿಗೆ ಬರಲಿದೆ ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಶ್ವೇತಭವನದ ಘೋಷಣೆ ಬೆನ್ನಲ್ಲೇ, ಬುಧವಾರದ ಆರಂಭಿಕ ವಹಿವಾಟಿನಲ್ಲಿ ಚೀನಾದ ಕರೆನ್ಸಿ ಯುವಾನ್ ಮೌಲ್ಯ ಸಾರ್ವಕಾಲಿಕ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ತೀವ್ರಗೊಳ್ಳುತ್ತಿರುವ ಚೀನಾ-ಅಮೆರಿಕ ವ್ಯಾಪಾರ ಉದ್ವಿಗ್ನತೆಗಳು ಮತ್ತು ಚೀನಾದ ಮೇಲೆ ಅಮೆರಿಕದಿಂದ ಶೇ 104ರಷ್ಟು ಸುಂಕ ಏರಿಕೆಗಳಿಂದ ಹೂಡಿಕೆದಾರರು ಚಿಂತಿತರಾಗಿದ್ದಾರೆ

ಅಂತರರಾಷ್ಟ್ರೀಯ ವಹಿವಾಟಿನಲ್ಲಿ ಡಾಲರ್ ಎದುರು ಯುವಾನ್ ಮೌಲ್ಯ ಶೇ 1 ಕ್ಕಿಂತ ಹೆಚ್ಚು ಕುಸಿದು 7.4288ಕ್ಕೆ ತಲುಪಿತ್ತು. ವಹಿವಾಟು ಅಂತ್ಯದ ವೇಳೆಗೆ 7.3390ಕ್ಕೆ ಸ್ಥಿರಗೊಂಡಿತ್ತು.

ಇದೇ ವೇಳೆ, ಟ್ರಂಪ್ ಸುಂಕ ಹೇರಿರುವ ಇತರೆ ದೇಶಗಳ ಜೊತೆಗೂ ಅಮೆರಿಕ ಅಧಿಕಾರಿಗಳು ಮಾತುಕತೆಯಲ್ಲಿ ತೊಡಗಿದ್ದಾರೆ.
.ಜೊತೆಯಾಗಿ ನಿಲ್ಲೋಣ: ಭಾರತಕ್ಕೆ ಚೀನಾ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.