ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಅಮೆರಿಕದ ಹೆಚ್ಚುವರಿ ಲಸಿಕೆ ಭಾರತಕ್ಕೆ: ನೆರವು ನೀಡಲು ಬೈಡನ್ ಆಡಳಿತಕ್ಕೆ ಆಗ್ರಹ

ಭಾರತದ ಪರಿಸ್ಥಿತಿ ಬಗ್ಗೆ ಅಮೆರಿಕದ ಜನಪ್ರತಿನಿಧಿಗಳ ಕಳವಳ
Last Updated 23 ಏಪ್ರಿಲ್ 2021, 6:07 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ಉದ್ಭವಿಸಿರುವ ಕೋವಿಡ್‌ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕದ ಕೆಲವು ಜನಪ್ರತಿನಿಧಿಗಳು, ಈ ಸಂಬಂಧ ಆ ದೇಶಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವಂತೆ ಜೋ ಬೈಡನ್ ಆಡಳಿತವನ್ನು ಒತ್ತಾಯಿಸಿದ್ದಾರೆ.

ಭಾರತೀಯ ಅಮೆರಿಕನ್ ಸಂಸದ ರೊ ಖನ್ನಾ, ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞ ಆಶೀಶ್‌ ಕೆ.ಝಾ ಅವರ ಟ್ವೀಟ್‌ ಹಂಚಿಕೊಂಡಿದ್ದಾರೆ. ‘ ಭಾರತದಲ್ಲಿ ಕೋವಿಡ್ ಅಪಾಯಕಾರಿ ವಾತಾವರಣ ಸೃಷ್ಟಿಸುತ್ತಿದೆ. ಇದರ ವಿರುದ್ಧ ಹೋರಾಡಬೇಕೆಂದರೆ ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಬೇಕು‘ ಎಂದು ಸಲಹೆ ನೀಡಿದ್ದಾರೆ.

‘ನಮ್ಮ ಬಳಿ 35 ರಿಂದ 40 ದಶಲಕ್ಷ ಡೋಸ್‌ಗಳಷ್ಟು ಅಸ್ಟ್ರೆಜೆನಕಾ ಲಸಿಕೆ ಇದೆ. ಸದ್ಯಕ್ಕೆ ಅಮೆರಿಕದಲ್ಲಿ ಅದನ್ನು ಬಳಸುವುದಿಲ್ಲ. ಇದನ್ನು ಭಾರತಕ್ಕೆ ಈಗಲೇ ನೀಡಬಹುದೇ ಅಥವಾ ಮಾರಾಟ ಮಾಡಬಹುದೇ? ಇದರಿಂದ ಆ ದೇಶಕ್ಕೆ ಬಹಳ ಸಹಾಯವಾಗುತ್ತದೆ‘ ಎಂದು ಝಾ ಕೇಳಿಕೊಂಡಿದ್ದಾರೆ.

ಡೆಮಾಕ್ರಟಿಕ್‌ ಸೆನಟರ್‌ ಎಡ್ವರ್ಡ್‌ ಮಾರ್ಕಿ, ‘ನಮ್ಮಲ್ಲಿ ಸಹಾಯ ಮಾಡುವುದಕ್ಕೆ ಸಂಪನ್ಮೂಲಗಳಿವೆ, ಅವು ಜನರಿಗೆ ಅಗತ್ಯವಾಗಿ ಬೇಕಾಗಿವೆ; ಅವಶ್ಯವಿರುವವರಿಗೆ ನೆರವು ನೀಡುವುದು ನಮ್ಮ ನೈತಿಕ ಬಾಧ್ಯತೆಯಾಗಿದೆ‘ ಎಂದು ಟ್ವೀಟ್‌ ಮಾಡಿದ್ದಾರೆ.

‘ವಿಶ್ವ ಭೂಮಿ ದಿನದಂದು ಭೂಮಿಯ ಆರೋಗ್ಯದ ಜತೆಗೆ, ಭೂಮಿಯ ಮೇಲೆ ನೆಲೆಸಿರುವ ಎಲ್ಲರ ಆರೋಗ್ಯವನ್ನೂ ರಕ್ಷಿಸಬೇಕು. ಅಮೆರಿಕದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸಾಕಾಗವಷ್ಟು ಕೊರೊನಾ ಲಸಿಕೆ ದಾಸ್ತಾನಿದೆ. ಆದರೆ, ನಾವು ಭಾರತದಂತಹ ರಾಷ್ಟ್ರಗಳಿಗೆ ತೀರಾ ಅಗತ್ಯವಾಗಿರುವ ಬೆಂಬಲ ನೀಡುವ ಬಗ್ಗೆ ಚಿಂತಿಸುತ್ತಿಲ್ಲ‘ ಎಂದು ಮಾರ್ಕಿ ಹೇಳಿದ್ದಾರೆ.

ಭಾರತದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಜಾರ್ಜಿ ಮೀಕ್ಸ್‌, ‘ಕೋವಿಡ್‌ ಎರಡನೇ ಅಲೆಯ ವಿರುದ್ಧ ಹೋರಾಡಲು ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ಬೆಂಬಲ ನೀಡುತ್ತಿದ್ದೇನೆ‘ ಎಂದು ಹೇಳಿದರು.

‘ಇಂಥ ಅಪಾಯ ಎದುರಾಗಿರುವ ಸಂದರ್ಭದಲ್ಲಿ ನಾವು ಸದಾ ಭಾರತದೊಂದಿಗೆ ಇರುತ್ತೇವೆ‘ ಎಂದು ಸಂಸದೆ ಹ್ಯಾಲೆ ಸ್ವೀವನ್ಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT