ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ದಿ ಮೇಲಿನ ದಾಳಿ: ನಿಧಿ ಸಂಗ್ರಹಿಸಿದ ಇರಾನ್‌ ಫೌಂಡೇಶನ್‌ಗೆ ದಂಡ

Last Updated 29 ಅಕ್ಟೋಬರ್ 2022, 2:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ಕಳೆದ ಆಗಸ್ಟ್‌ನಲ್ಲಿ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಭಾರತೀಯ ಮೂಲದ ಬ್ರಿಟಿಷ್‌–ಅಮೆರಿಕನ್‌ ಲೇಖಕ ಸಲ್ಮಾನ್‌ ರಶ್ದಿ ಅವರ ಮೇಲಿನ ಹಿಂಸಾತ್ಮಕ ದಾಳಿಗೆ ನಿಧಿ ಸಂಗ್ರಹಿಸಿದ್ದ ಇರಾನ್‌ ಮೂಲದ ಸಂಘಟನೆಗೆ ಅಮೆರಿಕ ದಂಡ ವಿಧಿಸಿದೆ.

ಸಲ್ಮಾನ್‌ ರಶ್ದಿ ಅವರ ಹತ್ಯೆಗೆ ಬಹುಕೋಟಿ ಡಾಲರ್‌ ಇನಾಮು ಘೋಷಿಸಿದ್ದ15 ಖೋರ್ಡಾಡ್ ಫೌಂಡೇಶನ್‌ಗೆ ಅಮೆರಿಕದ ಖಜಾನೆಯ ವಿದೇಶಿ ಸ್ವತ್ತುಗಳ ನಿಯಂತ್ರಣ ಕಚೇರಿ ದಂಡ ಹೇರಿದೆ. ರಶ್ದಿ ಅವರ ‘ದಿ ಸೆಟಾನಿಕ್‌ ವರ್ಸಸ್‌’ ಕೃತಿಯಲ್ಲಿ ಧರ್ಮನಿಂದನೆ ಇದೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

‘ರಶ್ದಿ ಅವರ ಮೇಲಿನ ಹಿಂಸಾಚಾರದ ದಾಳಿ ಭಯಾನಕವಾದುದು. ಈ ಕೃತ್ಯವನ್ನು ಇರಾನ್‌ ಪ್ರಶಂಸಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಬೆದರಿಕೆ ಹಾಕುವ ಮತ್ತು ಅಂಥವರ ಪರವಿರುವ ಇರಾನ್‌ ನಿಲುವನ್ನು ಅಮೆರಿಕ ಸಹಿಸುವುದಿಲ್ಲ’ ಎಂದು ಖಜಾನೆ ಅಧೀನಕಾರ್ಯದರ್ಶಿ (ಭಯೋತ್ಪಾದನೆ ಮತ್ತು ಆರ್ಥಿಕ ಗುಪ್ತಚರ ವಿಭಾಗ) ಬ್ರಿಯಾನ್ ನೆಲ್ಸನ್ ಹೇಳಿದರು.

ರಶ್ದಿ ಅವರಿಗೆ ವೇದಿಕೆಯಲ್ಲೇ ವ್ಯಕ್ತಿಯೊಬ್ಬ ಚಾಕುವಿನಿಂದ ದಾಳಿ ನಡೆಸಿದ್ದ. ಇದರಿಂದ ತೀವ್ರ ಗಾಯಗೊಂಡಿದ್ದ ರಶ್ದಿ ಅವರ ಒಂದು ಕಣ್ಣಿನ ದೃಷ್ಟಿ ಹೋಗಿದೆ ಎಂದು ಅವರ ಪ್ರತಿನಿಧಿ ಇತ್ತೀಚೆಗಷ್ಟೆ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT