ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ’: US ಸೆನೆಟರ್‌ಗಳ ಸಮಿತಿ

Published 14 ಜುಲೈ 2023, 20:29 IST
Last Updated 14 ಜುಲೈ 2023, 20:29 IST
ಅಕ್ಷರ ಗಾತ್ರ

ಸ್ಯಾನ್‌ ಫ್ರಾನ್ಸಿಸ್ಕೊ: ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ತಿಂಗಳೊಳಗೆ ‘ಅರುಣಾಚಲಪ್ರದೇಶ ಭಾರತದ ಅವಿಭಾಜ್ಯ ಅಂಗ’ ಎಂದು ಕಾಂಗ್ರೆಸ್‌ನ ಸೆನೆಟರ್‌ಗಳ ಸಮಿತಿ ನಿರ್ಣಯ ಅಂಗೀಕರಿಸಿದೆ.

ಸೆನೆಟರ್‌ಗಳಾದ ಜೆಫ್ ಮೆರ್ಕ್ಲಿ, ಬಿಲ್ ಹ್ಯಾಗರ್ಟಿ, ಟಿಮ್ ಕೈನೆ, ಕ್ರಿಸ್ ವ್ಯಾನ್ ಹೊಲ್ಲೆನ್‌ ಅವರು ಗುರುವಾರ ಈ ನಿರ್ಣಯ ಮಂಡಿಸಿದರು.

ಮೆಕ್‌ ಮಹೋನ್‌ ರೇಖೆ ಚೀನಾ ಮತ್ತು ಭಾರತದ ನಡುವಿನ ಅಂತರರಾಷ್ಟ್ರೀಯ ಗಡಿಯಾಗಿದೆ ಎಂದು ಪುನರುಚ್ಚರಿಸಿದೆ. ಅರುಣಾಚಲ ಪ್ರದೇಶದ ಹೆಚ್ಚಿನ ಭಾಗ ಚೀನಾದ ನಿಯಂತ್ರಣದಲ್ಲಿದೆ. ಇದು ಚೀನಾದ ಆಕ್ರಮಣಶೀಲ ಮತ್ತು ವಿಸ್ತರಣಾ ನೀತಿಯ ಭಾಗವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಈ ನಿರ್ಣಯ ಪೂರ್ಣ ಮತಕ್ಕಾಗಿ ಸೆನೆಟ್‌ಗೆ ಹೋಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT