ವಾಷಿಂಗ್ಟನ್: ಸೇನಾ ಬಲದಿಂದ ಭಾರತ – ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆಯಲ್ಲಿನ ಯಥಾಸ್ಥಿತಿಯನ್ನು ಬದಲಿಸಲು ಮುಂದಾಗಿದ್ದ ಚೀನಾದ ಕ್ರಮದ ವಿರುದ್ಧ ಅಮೆರಿಕದ ಸೆನೆಟ್‌ನಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದೆ. ರಾಜತಾಂತ್ರಿಕ ಪರಿಹಾರದ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳುವಂತೆ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಸೆನಟರ್‌ಗಳಾದ ಜಾನ್ ಕೊರ್ನಿಯನ್ ಮತ್ತು ಮಾರ್ಕ್ ವಾರ್ನರ್ ಅವರು ಈ ಖಂಡನಾ ನಿರ್ಣಯವನ್ನು ಮಂಡಿಸಿದರು. ಚೀನಾ ರಕ್ಷಣಾ ಪಡೆಗಳ ಬೆದರಿಕೆಯ ನಡುವೆಯೂ ಭಾರತದ ತನ್ನ ದೂರಸಂಪರ್ಕ ಮೂಲಸೌಕರ್ಯವನ್ನು ರಕ್ಷಿಸಿಕೊಳ್ಳಲು ಕ್ರಮಕೈಕೊಂಡಿರುವ ಕುರಿತು ನಿರ್ಣಯದಲ್ಲಿ ಶ್ಲಾಘಿಸಲಾಯಿತು.

ಮೇ 5ರಂದು ಪಶ್ಚಿಮ ಲಡಾಕ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ ಕೆಲವು ಪ್ರದೇಶಗಳನ್ನು ಚೀನಾ ಮತ್ತು ಭಾರತೀಯ ಯೋಧರು ಆಕ್ರಮಿಸಿಕೊಂಡಿದ್ದರು. ಈ ಸಂಬಂಧ ಜೂನ್ 15ರಂದು ಗಾಲ್ವನ್ ಕಣಿವೆಯಲ್ಲಿ ಈ ಎರಡೂ ದೇಶಗಳ ನಡುವೆ ಸಂಘರ್ಷ ನಡೆದಿತ್ತು. ಘಟನೆಯಲ್ಲಿ 20 ಮಂದಿ ಭಾರತೀಯ ಯೋಧರು ಹತ್ಯೆಯಾಗಿದ್ದರು. ಚೀನಾ ರಕ್ಷಣಾ ಪಡೆಯಲ್ಲೂ ಸಾವುನೋವುಗಳು ಸಂಭವಿಸಿದ್ದರೂ, ಆ ಬಗ್ಗೆ ಯಾವುದೇ ವಿವರವನ್ನು ಬಿಟ್ಟುಕೊಟ್ಟಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.