ವಾಷಿಂಗ್ಟನ್: ಚೀನಾ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಕೆನಡಾ ಸರಕುಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಒಪ್ಪಂದವು ನಿಮ್ಮ ದೇಶಕ್ಕೆ ಅಪಾಯವನ್ನು ಉಂಟು ಮಾಡುತ್ತದೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿಗೆ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, ಚೀನಾ ಜೊತೆ ಕೆನಡಾ ಒಪ್ಪಂದ ಮಾಡಿಕೊಂಡರೆ, ಅಮೆರಿಕಕ್ಕೆ ಬರುವ ಎಲ್ಲ ಕೆನಡಾದ ಸರಕುಗಳು ಮತ್ತು ಉತ್ಪನ್ನಗಳ ಮೇಲೆ ತಕ್ಷಣವೇ ಶೇ 100ರಷ್ಟು ಸುಂಕ ವಿಧಿಸಲಾಗುತ್ತದೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

ಅಮೆರಿಕದ ಸುಂಕಗಳನ್ನು ತಪ್ಪಿಸಿಕೊಳ್ಳಲು ಚೀನಾ, ಕೆನಡಾವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕಕ್ಕೆ ವಾಮಮಾರ್ಗದ ಮೂಲಕ ಚೀನಾದ ಸರಕುಗಳು ಮತ್ತು ಉತ್ಪನ್ನಗಳನ್ನು ಕಳುಹಿಸಲು ಕೆನಡಾ ‘ಡ್ರಾಪ್ ಆಫ್ ಪೋರ್ಟ್’ ಆಗಲಿದೆ ಎಂದು ಕಾರ್ನಿ ಭಾವಿಸಿದ್ದರೆ ಅದು ತಪ್ಪು ಎಂದು ಟ್ರಂಪ್ ಹೇಳಿದ್ದಾರೆ.

‘ಚೀನಾವು ಕೆನಡಾವನ್ನು ಜೀವಂತವಾಗಿ ನುಂಗುತ್ತದೆ. ಅವರ ವ್ಯವಹಾರಗಳು, ಸಾಮಾಜಿಕ ರಚನೆ ಮತ್ತು ಸಾಮಾನ್ಯ ಜೀವನ ವಿಧಾನದ ನಾಶ ಸೇರಿದಂತೆ ಸಂಪೂರ್ಣವಾಗಿ ಕೆನಡಾವನ್ನು ಕಬಳಿಸುತ್ತದೆ’ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇತ್ತೀಚೆಗೆ, ಚೀನಾಕ್ಕೆ ಭೇಟಿ ನೀಡಿದ್ದ ಕಾರ್ನಿ, ವಿಶ್ವಾಸಾರ್ಹ ಪಾಲುದಾರ ದೇಶ ಎಂದು ಹೊಗಳಿದ್ದರು. ಅಲ್ಲದೆ, ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದ ಸಂದರ್ಭದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯಾದ ಚೀನದಿಂದ ಹೂಡಿಕೆ ಆಕರ್ಷಿಸುವಂತೆ ಯುರೋಪಿಯನ್ ನಾಯಕರನ್ನು ಒತ್ತಾಯಿಸಿದ್ದರು.

ಈ ನಡುವೆ, ಜಾಗತಿಕ ಸಂಘರ್ಷಗಳನ್ನು ಪರಿಹರಿಸುವ ಗುರಿ ಹೊಂದಿರುವ ಉಪಕ್ರಮವಾದ ತಮ್ಮ ಶಾಂತಿ ಮಂಡಳಿಗೆ ಸೇರಲು ಕೆನಡಾಕ್ಕೆ ನೀಡಿದ್ದ ಆಹ್ವಾನವನ್ನು ಟ್ರಂಪ್ ಗುರುವಾರ ಹಿಂತೆಗೆದುಕೊಂಡಿದ್ದಾರೆ. ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಕಾರ್ನಿ ಮಾಡಿದ ಭಾಷಣದ ನಂತರ ಆ ಬದಲಾವಣೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.