ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಡಿಯೊ ನೋಡಿ: ಪ್ರಧಾನಿ ಮೋದಿ ಎದುರು ಆಸ್ಟ್ರಿಯನ್ನರಿಂದ ವಂದೇ ಮಾತರಂ ಗಾಯನ

ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್‌ನ ಆಸ್ಟ್ರಿಯಾ ದೇಶಕ್ಕೆ ಮಂಗಳವಾರದಿಂದ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.
Published 10 ಜುಲೈ 2024, 5:10 IST
Last Updated 10 ಜುಲೈ 2024, 5:10 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್‌ನ ಆಸ್ಟ್ರಿಯಾ ದೇಶಕ್ಕೆ ಮಂಗಳವಾರದಿಂದ ಎರಡು ದಿನ ಪ್ರವಾಸ ಕೈಗೊಂಡಿದ್ದಾರೆ.

ಮೋದಿ ಅವರಿಗೆ ಆಸ್ಟ್ರಿಯಾದ ಗಣ್ಯರು ಅದ್ಧೂರಿ ಸ್ವಾಗತ ಕೋರಿದ್ದು ವಿಶೇಷವೆಂದರೆ ಅಸ್ಟ್ರೀಯಾದ ಖ್ಯಾತ ಸಂಗೀತಗಾರರು ಮೋದಿ ಎದುರು ವಿಶಿಷ್ಠವಾಗಿ ವಂದೇ ಮಾತರಂ ಸಮೂಹ ಗಾಯನ ನಡೆಸಿಕೊಟ್ಟಿದ್ದಾರೆ.

ಅಸ್ಟ್ರೀಯಾ ಪ್ರಜೆಗಳ ಕಂಠದಿಂದ ‘ವಂದೇ ಮಾತರಂ’ ಗಾಯನ ವಿಶೇಷವಾಗಿ ಮೂಡಿಬಂದಿದ್ದು ಮೋದಿ ಸೇರಿದಂತೆ ಅನೇಕ ಭಾರತೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊವನ್ನು ಎಕ್ಸ್‌ ತಾಣದಲ್ಲಿ ಮೋದಿ ಅವರು ಹಂಚಿಕೊಂಡಿದ್ದು ಸಾಕಷ್ಟು ಮೆಚ್ಚುಗೆ ಗಳಿಸಿದೆ. ಆಸ್ಟ್ರಿಯಾ ಸಾಕಷ್ಟು ವೈವಿಧ್ಯಮಯ ಸಂಗೀತಕ್ಕೆ ಹೆಸರುವಾಸಿಯಾಗಿದೆ. ನನ್ನೆದುರು ವಂದೇ ಮಾತರಂ ಗಾಯನ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಮೋದಿ ಹೇಳಿಕೊಂಡಿದ್ದಾರೆ.

40 ವರ್ಷಗಳ ನಂತರ ಭಾರತದ ಪ್ರಧಾನಿ ಆಸ್ಟ್ರಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ಹಿಂದೆ ಇಂದಿರಾ ಗಾಂಧಿ ಅವರೇ ಕೊನೆಯ ಬಾರಿ ಭೇಟಿ ನೀಡಿದ್ದರು.

ಈ ಎರಡು ದಿನಗಳ ಪ್ರವಾಸದಲ್ಲಿ ಮೋದಿ ಅವರು ಹಲವು ಮಹತ್ವದ ಹೊಸ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಹೊಂದಲಾಗಿದೆ.

ಅಲ್ಲದೇ ಮೋದಿ ಅವರು ಬುಧವಾರ ಆಸ್ಟ್ರಿಯಾದಲ್ಲಿನ ಭಾರತ ಮೂಲದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಅಧ್ಯಕ್ಷ ಅಲೆಗ್ಸಾಂಡರ್ ವ್ಯಾನ್ ಅವರನ್ನು ಭೇಟಿಯಾಗಲಿದ್ದಾರೆ.

ವಿಶೇಷವೆಂದರೆ ಕಾರ್ಲ್ ನೇಹ್ಮರ್ ಅವರು ಮೋದಿ ಅವರನ್ನು ತಮ್ಮ ಖಾಸಗಿ ಸಮಾರಂಭವೊಂದಕ್ಕೆ ಆಹ್ವಾನಿಸಿದ್ದಾರೆ. ಇದರಲ್ಲಿ ಪ್ರಧಾನಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಮೂಲಗಳು ತಿಳಿಸಿವೆ.

ಎಕ್ಸ್ ತಾಣದಲ್ಲಿ ಅಸ್ಟ್ರೀಯಾ ಚಾನ್ಸಲರ್ ಅವರನ್ನು ಭೇಟಿಯಾಗಿದ್ದರ ಬಗ್ಗೆ ಸಂಭ್ರಮ ವ್ಯಕ್ತಪಡಿಸಿ ಮಾಹಿತಿ ಹಂಚಿಕೊಂಡಿರುವ ಮೋದಿ ಅವರು, ಜಾಗತಿಕವಾಗಿ ಉತ್ತಮವಾದದ್ದನ್ನು ಸಾಧಿಸಲು ಉಭಯ ದೇಶಗಳು ಶಕ್ತಿಮೀರಿ ಶ್ರಮಿಸಲಿವೆ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT