ಏಷ್ಯನ್-ಅಮೆರಿಕನ್ನರು (ಎಎ), ಸ್ಥಳೀಯ ಹವಾಯಿಯನ್ನರು ಮತ್ತು ಪೆಸಿಫಿಕ್ ಐಲ್ಯಾಂಡರ್ಸ್ (ಎನ್‌ಎಚ್‌ಪಿಐ) ಅಧ್ಯಕ್ಷರ ಸಲಹಾ ಆಯೋಗವು ಈ ವಾರದ ತನ್ನ ಸಭೆಯಲ್ಲಿ ಈ ಶಿಫಾರಸುಗಳನ್ನು ಮಾಡಿತು. ಭಾರತ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಅವರು ಈ ಬಗ್ಗೆ ಪ್ರಸ್ತಾವ ಮಾಡಿದರು. ಆಯೋಗವು ಶಿಫಾರಸುಗಳನ್ನು ಅಂಗೀಕರಿಸಿತು.