ಜಿನಿವಾ: ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್ಒ) ಹೊರಹೋಗಿರುವ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಅಮೆರಿಕವನ್ನು ಒತ್ತಾಯಿಸಿ ಎಂದು ಡಬ್ಲ್ಯುಎಚ್ಒ ಮಹಾ ನಿರ್ದೇಶಕ ಟೆಡ್ರೋಸ್ ಅದನೊಮ್ ಗೆಬ್ರಿಯೆಸಸ್ ಅವರು ಜಾಗತಿಕ ನಾಯಕರಿಗೆ ಕರೆ ನೀಡಿದ್ದಾರೆ.

ಕಳೆದ ಬುಧವಾರ ಸದಸ್ಯ ರಾಷ್ಟ್ರಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಅತಿ ದೊಡ್ಡ ದೇಣಿಗೆದಾರ ಅಮೆರಿಕದ ನಿರ್ಗಮನದ ನಂತರ ಖರ್ಚು–ವೆಚ್ಚ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜರ್ಮನಿ ರಾಜತಾಂತ್ರಿಕ ಅಧಿಕಾರಿ ಬ್ಯೋರ್ನ್ ಕಮೆಲ್ ಅವರು, ‘ಮನೆಯ ಸೂರಿಗೆ ಬೆಂಕಿ ಬಿದ್ದಿದೆ. ಆದಷ್ಟು ಬೇಗನೆ ಬೆಂಕಿಯನ್ನು ಆರಿಸಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

2024–25ನೇ ಸಾಲಿನಲ್ಲಿ ಅಮೆರಿಕ ಡಬ್ಲ್ಯುಎಚ್ಒಗೆ ₹8.6 ಲಕ್ಷ ಕೋಟಿ ದೇಣಿಗೆ ನೀಡಿತ್ತು. ಇದು ಡಬ್ಲ್ಯುಎಚ್ಒನ ಬಜೆಟ್ನ ಶೇ 14ರಷ್ಟು.

ಡಬ್ಲ್ಯುಎಚ್ಒದ ಆರೋಗ್ಯ ತುರ್ತು ಕಾರ್ಯಕ್ರಮಗಳು ಅಮೆರಿಕವನ್ನು ಅವಲಂಬಿಸಿವೆ ಎಂದು ಬಜೆಟ್ ದಾಖಲೆಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.