ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಲ್ಡೀವ್ಸ್‌: ‘ಆರ್ಥಿಕ ಅಸ್ಥಿರತೆ’ ಸೃಷ್ಟಿಸುವವರ ಪತ್ತೆಗೆ ಕ್ರಮ- ಮೊಯಿಜು

Published : 28 ಆಗಸ್ಟ್ 2024, 16:02 IST
Last Updated : 28 ಆಗಸ್ಟ್ 2024, 16:02 IST
ಫಾಲೋ ಮಾಡಿ
Comments

ಮಾಲೆ: ‘ದೇಶದಲ್ಲಿ ಆರ್ಥಿಕ ಅಸ್ಥಿರತೆ ಸೃಷ್ಟಿಸಲು ಉದ್ದೇಶಿಸಿರುವವರನ್ನು ಪತ್ತೆಮಾಡಲು ಕಾರ್ಯಪ್ರವೃತ್ತರಾಗಿದ್ದೇವೆ’ ಎಂದು ಮಾಲ್ಡೀವ್ಸ್‌ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸರ್ಕಾರವನ್ನು ಕೆಡವಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ ಎಂದು ಎರಡು ದಿನಗಳ ಹಿಂದಷ್ಟೇ ಅಧ್ಯಕ್ಷ ಮೊಹಮ್ಮದ್‌ ಮೊಯಿಜು ಅವರು ಹೇಳಿದ್ದರು.

ಮಾಲ್ದೀವ್ಸ್‌ನ ಜನರು ತಮ್ಮ ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌ಗಳಿಂದ ವಿದೇಶಿ ವಹಿವಾಟು ನಡೆಸದಂತೆ ದೇಶದ ಕೇಂದ್ರೀಯ ಬ್ಯಾಂಕ್‌ ‘ಬ್ಯಾಂಕ್‌ ಆಫ್‌ ಮಾಲ್ದೀವ್ಸ್‌’ ಭಾನುವಾರ ನಿರ್ಬಂಧ ಹೇರಿತ್ತು. ಹೊಸದಾಗಿ ನೀಡುವ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳಿಗೂ ವಿದೇಶಿ ವಹಿವಾಟು ನಿರ್ಬಂಧಿಸಲಾಗಿತ್ತು.

ನಿರ್ಬಂಧ ಹೇರಿದ ಕೆಲವೇ ಗಂಟೆಗಳಲ್ಲಿಯೇ ‌ಕೇಂದ್ರೀಯ ಬ್ಯಾಂಕ್‌ ನಿರ್ಬಂಧವನ್ನು ತೆರವು ಮಾಡಿತು. ಮಾಲ್ದೀವ್ಸ್‌ ಹಣಕಾಸು ಪ್ರಾಧಿಕಾರದ (ಎಂಎಂಎ) ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅದು ಹೇಳಿತ್ತು. 

‘ವಿದೇಶಿ ವಹಿವಾಟು ನಿರ್ಬಂಧದಿಂದ ದೇಶದಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಲಿದೆ ಎಂದು ಭಯ ಹುಟ್ಟಿಸಿ, ಜನರು ಬೀದಿಗಿಳಿಯುವಂತೆ ಮಾಡಿ, ಸರ್ಕಾರವನ್ನು ಬೀಳಿಸಲು ಕೆಲವು ಉದ್ದೇಶಿಸಿದ್ದಾರೆ. ಇವರನ್ನು ಪತ್ತೆ ಮಾಡಲಾಗುವುದು’ ಎಂದು ಪೊಲೀಸರು ಸೋಮವಾರ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT