ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಪ್ಪುಗಟ್ಟಿದ ನಯಾಗರ ಜಲಪಾತದಲ್ಲಿ ನಯನ ಮನೋಹರ ದೃಶ್ಯ ವಿಸ್ಮಯ

Last Updated 29 ಡಿಸೆಂಬರ್ 2022, 6:46 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದಲ್ಲಿ ಶತಮಾನದಲ್ಲೇ ವಿಪರೀತ ಚಳಿ ಕಾಡುತ್ತಿದೆ. ಹೆಪ್ಪುಗಟ್ಟಿದ ವಿಶ್ವ ಪ್ರಸಿದ್ಧ ನಯಾಗರ ಜಲಪಾತದ ನಡುವೆ ನೀರು ಹರಿಯುತ್ತಿರುವುದು ನಯನ ಮನೋಹರ ದೃಶ್ಯ ವಿಸ್ಮಯಕ್ಕೆ ಕಾರಣವಾಗಿದೆ.

ಚಳಿಗಾಲದಲ್ಲೂ ನಯಾಗರ ಜಲಪಾತ ಮಂಜುಗಡ್ಡೆಯಾಗದೇ ಸರಾಗವಾಗಿ ನೀರು ಹರಿಯುತ್ತಿರುವುದು ವಿಶೇಷವೆನಿಸಿದೆ.

ಕ್ರಿಸ್ಮಸ್ ವಾರಾಂತ್ಯದಲ್ಲಿ ಭಾರಿ ಹಿಮಪಾತ ಉಂಟಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಅನೇಕ ಮಂದಿ ಸಾವಿಗೀಡಾಗಿದ್ದಾರೆ.

ವಿಶ್ವದ ಅತಿ ದೊಡ್ಡ ಜಲಪಾತಗಳಲ್ಲಿ ಒಂದೆನಿಸಿರುವ ನಯಾಗರ ಮಂಜುಗಡ್ಡೆಯಿಂದ ಆವೃತವಾಗಿದೆ. ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತ ಚಳಿಗಾಲದ ಅದ್ಭುತವಾಗಿ ರೂಪಾಂತರಗೊಂಡಿದೆ.

ನಯಾಗರ ಎಂದರೆ ಜಲಸಂಧಿ ಎಂದೇ ಅರ್ಥ. ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ನಡುವೆ ಅಂತರರಾಷ್ಟ್ರೀಯ ಗಡಿರೇಖೆಯಾಗಿ ಗುರುತಿಸಲ್ಪಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT