ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಡ್ರೋನ್‌ ಹೊಡೆದುರುಳಿಸಿದ ಹುತಿ ಬಂಡುಕೋರರು

Published 28 ಏಪ್ರಿಲ್ 2024, 13:45 IST
Last Updated 28 ಏಪ್ರಿಲ್ 2024, 13:45 IST
ಅಕ್ಷರ ಗಾತ್ರ

ಜೆರುಸಲೇಂ: ‘ಅಮೆರಿಕ ಸೇನೆಯ ಎಂಕ್ಯೂ–9 ರೀಪರ್‌ ಎಂಬ ಮತ್ತೊಂದು ಡ್ರೋನ್‌ಅನ್ನು ಹೊಡೆದುರುಳಿಸಲಾಗಿದೆ’ ಎಂದು ಯೆಮನ್‌ನ ಹುತಿ ಬಂಡುಕೋರರು ಶನಿವಾರ ತಿಳಿಸಿದ್ದಾರೆ.

ಡ್ರೋನ್‌ನ ಕೆಲವು ಅವಶೇಷಗಳ ಭಾಗಗಳ ದೃಶ್ಯಗಳನ್ನು ಹುತಿ ಬಂಡುಕೋರರು ಪ್ರಸಾರ ಮಾಡಿದ್ದಾರೆ.

‘ಸಾದಾ ಪ್ರಾಂತ್ಯದಲ್ಲಿ ಈ ರೀಪರ್‌ ಡ್ರೋನ್‌ಅನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸಲಾಗಿದೆ’ ಎಂದು ಹುತಿ ಬಂಡುಕೋರರು ತಿಳಿಸಿದ್ದಾರೆ.

ಅಮೆರಿಕದ ರಕ್ಷಣಾ ಸಚಿವಾಲಯದ ವಕ್ತಾರರೂ ಆಗಿರುವ ವಾಯುಸೇನೆಯ ಲೆಫ್ಟಿನೆಂಟ್‌ ಕರ್ನಲ್‌ ಬ್ರೈಯಾನ್‌ ಜೆ. ಮೆಕ್‌ಗ್ಯಾರಿ ಅವರು, ‘ಅಮೆರಿಕ ಸೇನೆಯ ಡ್ರೋನ್‌ಅನ್ನು ಯೆಮನ್‌ನಲ್ಲಿ ಹೊಡೆದುರುಳಿಸಲಾಗಿದೆ‘ ಎಂಬುದನ್ನು ಶನಿವಾರ ಒಪ್ಪಿಕೊಂಡಿದ್ದಾರೆ.

ಡ್ರೋನ್‌ ನಾಶಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿರುವ ಬ್ರೈಯಾನ್‌ ಅವರು, ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT