ಲಂಡನ್, (ಐಎಎನ್‌ಎಸ್): 9/11ರ ದಾಳಿ ನಡೆದು 10 ವರ್ಷಗಳು ಸಂದ ಸಂದರ್ಭದಲ್ಲಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಇಂಟರ್‌ನೆಟ್‌ನಲ್ಲಿ ಹೊಸ ವಿಡಿಯೊ ದೃಶ್ಯಗಳನ್ನು ಪ್ರಸಾರ ಮಾಡಿದೆ.

`ನಮ್ಮ ಸಂಘಟನೆಯು ವಿಜಯದ ಹಾದಿಯಲ್ಲಿದೆ~ ಎಂದು ಸಂಘಟನೆಯ ಹೊಸ ಮುಖ್ಯಸ್ಥ ಐಮನ್ ಅಲ್ ಜವಾಹಿರಿ ಹೇಳಿದ್ದಾನೆ.

`ಶೀಘ್ರದಲ್ಲೇ ಜಯ~ ಎಂಬ ತಲೆಬರಹದ, ಒಂದು ಗಂಟೆ ಕಾಲದ ವಿಡಿಯೊ ದೃಶ್ಯವನ್ನು ಜವಾಹಿರಿ ಸಿದ್ಧಪಡಿಸಿದ್ದಾಗಿ ಸ್ಕೈ ನ್ಯೂಸ್ ಚಾನೆಲ್ ವರದಿ ಮಾಡಿದೆ.

ಈ ವಿಡಿಯೊದಲ್ಲಿ ಬಿನ್ ಲಾಡೆನ್, `ಪ್ರಮುಖ ಕಂಪೆನಿಗಳ ಗುಲಾಮರಾಗಬೇಡಿ~ ಎಂದು ಅಮೆರಿಕದ ಪ್ರಜೆಗಳಿಗೆ ಕರೆ ನೀಡಿರುವುದನ್ನು ದಾಖಲಿಸಲಾಗಿದೆ.

ಈಜಿಪ್ಟ್, ಲಿಬಿಯಾ ಮತ್ತು ಟ್ಯುನೀಷಿಯದಲ್ಲಿ ಇತ್ತೀಚೆಗೆ ನಡೆದ ಬಂಡಾಯಕ್ಕೆ ಬೆಂಬಲ ವ್ಯಕ್ತಪಡಿಸಿರುವ ಜವಾಹಿರಿ, ಕ್ರಾಂತಿಗಳು ಅಮೆರಿಕದ ಸೋಲು ಎಂದು ಬಣ್ಣಿಸಿದ್ದಾನೆ.

ಈ ರಾಷ್ಟ್ರಗಳಲ್ಲಿ ನಿಜವಾದ ಇಸ್ಲಾಂ ಅನ್ನು ಜಾರಿ ಮಾಡಬೇಕು ಎಂದೂ ಆತ ಕರೆ ನೀಡಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.